ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನದಿಗೆ ಉರುಳಿದ ಬಸ್: ರಷ್ಯಾದ 13 ಪ್ರವಾಸಿಗರ ಜಲಸಮಾಧಿ

ಉತ್ತರಾಖಂಡದ ಭಾಗೀರಥಿ ನದಿಗೆ ಪ್ರವಾಸಿಗರ ಬಸ್ ವೊಂದು..

Srinivasa Murthy VN
Updated On : 10 Jun 2014, 5:26 am

ಡೆಹ್ರಾಡೂನ್: ಉತ್ತರಾಖಂಡದ ಭಾಗೀರಥಿ ನದಿಗೆ ಪ್ರವಾಸಿಗರ ಬಸ್ ವೊಂದು ಉರುಳಿಬಿದ್ದಿದ್ದು, ಬಸ್‌ನಲ್ಲಿದ್ದ 13 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ.

ಹಿಮಾಚಲ ಪ್ರದೇಶದ ಬಿಯಾಸ್ ನದಿಗೆ ಅಣೆಕಟ್ಟೆಯಿಂದ ನೀರು ಬಿಟ್ಟ ಪರಿಣಾಮ ಹೈದರಾಬಾದ್ ಮೂಲದ 24 ವಿಧ್ಯಾರ್ಥಿಗಳು ಜಲಸಮಾಧಿಯಾದ ಘಟನೆ ಹಸಿರಾಗಿರುವಾಗಲೇ ಉತ್ತರಖಂಡ್‌ನಲ್ಲಿ ಅಂತಹುದೇ ಮತ್ತೊಂದು ಘಟನೆ ನಡೆದಿದೆ. ಪ್ರವಾಸಕ್ಕೆ ಆಗಮಿಸಿದ್ದ ರಷ್ಯಾ ಮೂಲದ 13 ಮಂದಿ ಪ್ರವಾಸಿಗರು ಉತ್ತರಾಖಂಡದ ಭಾಗೀರಥಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಐತಿಹಾಸಿಕ ಪ್ರವಾಸಿ ತಾಣ ಗಂಗೋತ್ರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬಸ್‌ನಲ್ಲಿದ್ದ 14 ಮಂದಿ ಪ್ರವಾಸಿಗರ ಪೈಕಿ 13 ಮಂದಿ ಸಾವನ್ನಪ್ಪಿದ್ದಾರೆ. ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ನದಿಗೆ ಉರುಳಿ ಬಿದಿದ್ದೆ ಎಂದು ಹೇಳಲಾಗುತ್ತಿದೆ. ಬಸ್ ಸಂಪೂರ್ಣವಾಗಿ ನದಿಯಲ್ಲಿ ಮುಳುಗಿದ್ದು, ಮೃತ ದೇಹಗಳಿಗಾಗಿ ಶೋಧಕಾರ್ಯ ಆರಂಭವಾಗಿದೆ.

ಅಗ್ನಿಶಾಮಕ ದಳ ಮತ್ತು ಮುಳುಗ ತಜ್ಞರು ಸ್ಥಳಕ್ಕಾಗಿಮಿಸಿದ್ದು, ಮೃತದೇಹಗಳಿಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯರು ಕೈಜೋಡಿಸಿದ್ದು, ಶೋಧಕಾರ್ಯದಲ್ಲಿ ತೊಡಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement