ಸಂಗೀತ ನಿರ್ದೇಶಕ ಗೌತಮ್ರನ್ನು ವರಿಸಲಿರುವ ರೂಪ ಅಯ್ಯರ್
ಚಿತ್ರ ನಿರ್ದೇಶಕಿ ರೂಪ ಅಯ್ಯರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಚಂದ್ರ ಚಿತ್ರದ..
ಬೆಂಗಳೂರು: ಚಿತ್ರ ನಿರ್ದೇಶಕಿ ರೂಪ ಅಯ್ಯರ್ ಅವರು ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಚಂದ್ರ ಚಿತ್ರದ ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಅವರನ್ನು ವಿವಾಹವಾಗಲಿದ್ದಾರೆ.
ರೂಪ ಅಯ್ಯರ್ ಮತ್ತು ಗೌತಮ್ ಶ್ರೀವತ್ಸ ಅವರ ಮದುವೆಗೆ ಉಭಯ ಕುಟುಂಬದ ಹಿರಿಯರು ಒಪ್ಪಿಗೆ ನೀಡಿದ್ದು, ಇಂದು ಇವರ ವಿವಾಹ ನಿಶ್ಚಯ ಕಾರ್ಯಕ್ರಮ ನೇರವೇರಿತು. ಬೆಂಗಳೂರಿನ ಬೃಂದಾವನ ಅಪಾರ್ಟ್ಮೆಂಟಿನಲ್ಲಿರುವ ರೂಪ ಅವರ ನಿವಾಸದಲ್ಲಿ ಸರಳವಾಗಿ ರೂಪ ಮತ್ತು ಗೌತಮ್ ಅವರ ವಿವಾಹ ನಿಶ್ಚಯ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೆ ರೂಪ ಮತ್ತು ಗೌತಮ್ ಅವರ ಕುಟುಂಬಸ್ಥರು ಸೇರಿದಂತೆ ಕೆಲವೇ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿತ್ತು.
ಗೌತಮ್ ಶ್ರೀವತ್ಸ ಮತ್ತು ರೂಪ ಅವರು ಸಂಬಂಧಿಕರಾಗಿದ್ದು, ಇತ್ತೀಚೆಗೆ ರೂಪ ಅಯ್ಯರ್ ಅವರು ನಿರ್ದೇಶಿಸಿ, ನಿರ್ಮಾಣ ಮಾಡಿದ್ದ ಚಂದ್ರ ಚಿತ್ರಕ್ಕೆ ಗೌತಮ್ ಸಂಗೀತ ನಿರ್ದೇಶನ ಮಾಡಿದ್ದರು. ಚಂದ್ರ ಚಿತ್ರ ನಿರ್ಮಾಣ ವೇಳೆಯಲ್ಲಿಯೇ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ಇದೀಗ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ವಿವಾಹವನ್ನು ನಿಶ್ಚಯಿಸಲಾಗಿದೆ.