ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

2ನೇ ದಿನವೂ ಮುಂದುವರೆದ 'ಕ್ಯಾಂಪಕೋಲಾ' ಪ್ರತಿಭಟನೆ

ಕ್ಯಾಂಪಕೋಲಾ ವಸತಿ ಸಮುಚ್ಛಯವನ್ನು ಕೆಡವುವ ಮುಂಬೈ ಮಹಾನಗರ ಪಾಲಿಕೆ..

Srinivasa Murthy VN
Updated On : 21 Jun 2014, 7:33 am

ಮುಂಬೈ: ಕ್ಯಾಂಪಕೋಲಾ ವಸತಿ ಸಮುಚ್ಛಯವನ್ನು ಕೆಡವುವ ಮುಂಬೈ ಮಹಾನಗರ ಪಾಲಿಕೆಯ ನಿರ್ಧಾರವನ್ನು ಖಂಡಿಸಿ ಅಲ್ಲಿನ ನಿವಾಸಿಗಳು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನವೂ ಮುಂದುವರೆದಿದೆ.

ಇಂದು ಬೆಳಗ್ಗೆಯೇ ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು ಕ್ಯಾಂಪಕೋಲಾ ವಸತಿ ಸಮುಚ್ಛಯಕ್ಕೆ ಆಗಮಿಸಿದ್ದು, ಜಾಗ ಖಾಲಿಮಾಡುವಂತೆ ನಿವಾಸಿಗಳ ಮನವೊಲಿಕೆಗೆ ಯತ್ನಿಸಿದರು. ಆದರೆ ನಿವಾಸಿಗಳ ಮನವೊಲಿಕೆ ಯತ್ನ ವಿಫಲವಾದ ಹಿನ್ನಲೆಯಲ್ಲಿ ಮತ್ತು ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ಕ್ಯಾಂಪಕೋಲಾ ನಿವಾಸಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಘಟನಾ ಸ್ಥಳದಲ್ಲಿ ನೂರಾರು ಪೊಲೀಸರು ಮೊಕ್ಕಾಂ ಹೂಡಿದ್ದು, ನಿವಾಸಿಗಳು ವಸತಿ ಸಮುಚ್ಛಯದ ಪ್ರಮುಖ ಗೇಟ್ ಅನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೂಲನಕ್ಷೆಯನ್ನು ತಿರುಚಿ ಕ್ಯಾಂಪಕೋಲ ವಸತಿ ಸಮುಚ್ಛಯದಲ್ಲಿ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಲಾಗಿದ್ದು, ಅಕ್ರಮ ನಿವಾಸಗಳನ್ನು ಕೆಡವುವಂತೆ ಬಿಎಂಸಿ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ಸೂಚಿಸಿತ್ತು. ನ್ಯಾಯಾಲಯದ ಆದೇಶದ ಅನ್ವಯ ನಿನ್ನೆ ಅಕ್ರಮ ಫ್ಲಾಟ್‌ಗಳನ್ನು ಕೆಡವಲು ಬಂದಿದ್ದ ಅಧಿಕಾರಿಗಳಿಗೆ ಸ್ಥಳೀಯ ನಿವಾಸಿಗಳು ತಡೆವೊಡ್ಡಿದ್ದರು. ಹೀಗಾಗಿ ನಿವಾಸಿಗಳ ವಿರುದ್ಧ ಅಧಿಕಾರಿಗಳು ನ್ಯಾಯಾಂಗ ನಿಂಧನೆ ಪ್ರಕರಣ ದಾಖಲಿಸಲು ಮುಂದಾಗಿದ್ದರು.

ಇಂದು ಕೂಡ ನಿವಾಸಿಗಳ ಪ್ರತಿಭಟನೆ ಮುಂದುವರೆದೆ ಹಿನ್ನಲೆಯಲ್ಲಿ ವಾರ್ಲಿ ಪೊಲೀಸ್ ಠಾಣೆಯಲ್ಲಿ ಬಿಎಂಸಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಅಲ್ಲದೆ ತೆರವು ಕಾರ್ಯಾಚರಣೆಗೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಪ್ರಸ್ತುತ ತೆರವು ಕಾರ್ಯಾಚರಣೆಯ ವಿಡಿಯೋ ಚಿತ್ರೀಕರಣಕ್ಕೆ ಬಿಎಂಸಿ ಅಧಿಕಾರಿಗಳು ಮುಂದಾಗಿದ್ದು, ಕಾರ್ಯಾಚರಣೆಗೆ ಅಡ್ಡಿಪಡಿಸುವವರ ವಿರುದ್ಧ ದೂರು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಪ್ರಸ್ತುತ ಕ್ಯಾಂಪಕೋಲಾ ವಸತಿ ಸಮುಚ್ಛಯದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ 12 ಅಂತಸ್ತುಗಳಲ್ಲಿ ಸುಮಾರು 500 ಅಧಿಕ ಮಂದಿ ವಾಸವಾಗಿದ್ದು, ಇದೇ ನಿವಾಸಿಗಳು ಇದೀಗ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement