ಅಂಬಿ ವಿರುದ್ಧ 'ಲೋಕಾ'ಗೆ ದೂರು
ಅಕ್ರಮ ನಿವೇಶನ ಪಡೆದ ಆರೋಪದ ಮೇಲೆ ವಸತಿ ಸಚಿವ ಮತ್ತು ನಟ ಅಂಬರೀಶ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ.
ಮಂಡ್ಯ: ಅಕ್ರಮ ನಿವೇಶನ ಪಡೆದ ಆರೋಪದ ಮೇಲೆ ವಸತಿ ಸಚಿವ ಮತ್ತು ನಟ ಅಂಬರೀಶ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ.
ಮಂಡ್ಯ ಮೂಲದ ಆರ್ಟಿಐ ಕಾರ್ಯಕರ್ತ ರವೀಂದ್ರ ಎಂಬುವವರು ಅಂಬರೀಶ್ ಅವರ ವಿರುದ್ಧ ದೂರು ದಾಖಲಿಸಿದ್ದು, ಮಂಡ್ಯ ಗೃಹ ಮಂಡಳಿ ಮೂಡಾದಿಂದ ಅಕ್ರಮವಾಗಿ ಅಂಬರೀಶ್ ನಿವೇಶನ ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ವಸತಿ ಸಚಿವರಾಗಿರುವ ಅಂಬರೀಶ್ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ ಮತ್ತು ಮೂಡಾಗೆ ನಕಲಿ ದಾಖಲೆ ಸಲ್ಲಿಸಿ ಮಂಡ್ಯದಲ್ಲಿ 2 ನಿವೇಶನ ಪಡೆದಿರುವುದು ಮಾಹಿತಿ ಹಕ್ಕು ಕಾಯ್ದೆ ಮೂಲಕ ತಿಳಿದುಬಂದಿದೆ. ಹೀಗಾಗಿ ನಟ ಅಂಬರೀಶ್ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ತಾವು ಲೋಕಾಯುಕ್ತದಲ್ಲಿ ದೂರು ಸಲ್ಲಿಸಿರುವುದಾಗಿ ರವೀಂದ್ರ ಹೇಳಿದ್ದಾರೆ.