ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಜ್ಯ ಮಹಿಳಾ ಆಯೋಗದ ಅದ್ಯಕ್ಷರಾಗಿ ಮಂಜುಳಾ ಮಾನಸ ಆಯ್ಕೆ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿ ಮಂಜುಳ ಮಾನಸ..

Srinivasa Murthy VN
Updated On : 21 Jun 2014, 5:28 am

ಬೆಂಗಳೂರು: ಬಹು ದಿನಗಳಿಂದ ಖಾಲಿ ಉಳಿದಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಮಂಜುಳ ಮಾನಸ ಅವರನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಂಜುಳ ಮಾನಸ ಅವರು ಮೂಲತಃ ಮೈಸೂರು ಮೂಲದವರಾಗಿದ್ದು ವಕೀಲ ವೃತ್ತಿಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 6 ತಿಂಗಳಿಂದ ಖಾಲಿ ಉಳಿದಿದ್ದ ಹುದ್ದೆಗೆ ಇಂದು ರಾಜ್ಯ ಸರ್ಕಾರ ಮಂಜುಳಾ ಮಾನಸ ಅವರನ್ನು ನೇಮಿಸಿದ್ದು, 3 ವರ್ಷಗಳ ಅವಧಿಗೆ ಮಂಜುಳ ಅವರನ್ನು ಆಯ್ಕೆ ಮಾಡಿದೆ.

ಮಂಜುಳಾ ಅವರೊಂದಿಗೆ ಹೊಸದಾಗಿ 6 ಸದಸ್ಯರನ್ನು ಕೂಡ ರಾಜ್ಯ ಸರ್ಕಾರ ನೇಮಿಸಿದೆ. ಅನಿತಾ-ಧಾರವಾಡ, ಶಾರದ-ಹಾಸನ, ಶಾಮ್ಲಾ ಭಂಡಾರಿ-ಉಡುಪಿ, ರಫ್ತಾ ಮತೀನ್-ಬೀದರ್, ಪುಷ್ಪಾ ಲಕ್ಷ್ಮಣಸ್ವಾಮಿ-ಬೆಂಗಳೂರು, ಸುಮಾ ಹೆಗ್ಡೆ-ಬೆಂಗಳೂರು ಅವರನ್ನು ರಾಜ್ಯ ಮಹಿಳಾ ಆಯೋಗದ ಸದಸ್ಯೆಯರನ್ನಾಗಿ ನೇಮಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement