ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಮೋ ಟೀ ಅಂಗಡಿ ಆಯ್ತು, ಈಗ ನಮೋ ಆ್ಯಂಟಿ ವೈರಸ್

ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಖ್ಯಾತಿ ಗಳಿಸಿದ್ದ ನಮೋ ನಾಮಧೇಯ ಇದೀಗ ಐಟಿ ಕ್ಷೇತ್ರಕ್ಕೂ ಕಾಲಿಟ್ಟಿದೆ.

Srinivasa Murthy VN
Updated On : 22 Jun 2014, 2:32 am

ನವದೆಹಲಿ: ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಖ್ಯಾತಿ ಗಳಿಸಿದ್ದ ನಮೋ ನಾಮಧೇಯ ಇದೀಗ ಐಟಿ ಕ್ಷೇತ್ರಕ್ಕೂ ಕಾಲಿಟ್ಟಿದೆ.

Homegrown IT firm Innovazion ಸಂಸ್ಥೆಯು ನಮೋ ಆ್ಯಂಟಿ ವೈರಸ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಇದು ಇತರೆ ತಂತ್ರಾಂಶಗಳಿಂತ ವೇಗವಾಗಿ ಕಂಪ್ಯೂಟರ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಪ್ರಸ್ತುತ ಪ್ರಾಥಮಿಕ ಹಂತದ ಕಾರ್ಯಾಚರಣೆಯ ತಂತ್ರಾಂಶವನ್ನು ಮಾತ್ರ ಸಂಸ್ಥೆ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ತಂತ್ರಾಂಶವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಪ್ರಸ್ತುತ ಬಿಡುಗಡೆಯಾಗಿರುವ ತಂತ್ರಾಂಶವನ್ನು ಉಚಿತವಾಗಿ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆಯಬಹುದಾಗಿದೆ. 'ಐಟಿ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದ್ದು, ವರ್ಷದಿಂದ ವರ್ಷಕ್ಕೆ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದೆ. ಅಂತೆಯೇ ಹ್ಯಾಕರ್ಸ್‌ಗಳ ದಾಳಿಕೂಡ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದೆ'.

'ಒಂದು ವರದಿಯ ಪ್ರಕಾರ ಭಾರತದಲ್ಲಿ ಇಂಟರ್‌ನೆಟ್ ಬಳಕೆ ಮಾಡುತ್ತಿರುವವ ಪೈಕಿ ಶೇ.13ರಷ್ಟು ಮಂದಿ ಮಾತ್ರ ಪರವಾನಾಗಿ ಇರುವ ಆ್ಯಂಟಿ ವೈರಸ್ ತಂತ್ರಾಂಶವನ್ನು ಬಳಕೆ ಮಾಡುತ್ತಿದ್ದು, ಶೇ.30ರಷ್ಟು ಮಂದಿ ಹಳೆಯ ತಂತ್ರಾಂಶವನ್ನೇ ಪುನರ್ ಇನ್ಸ್ಟಲೇಷನ್ ಮಾಡಿ ಅಥವಾ ಉಚಿತ ತಂತ್ರಾಂಶಗಳನ್ನು ಬಳಸುತ್ತಿದ್ದಾರೆ. ಉಳಿದ ಶೇ.57 ರಷ್ಟು ಮಂದಿ ಆ್ಯಂಟಿ ವೈರಸ್ ಇಲ್ಲದೇ ಅಥವಾ ಸುರಕ್ಷಿತವಲ್ಲದ ಅನಾಮಧೇಯ ತಂತ್ರಾಂಶಗಳನ್ನು ಬಳಸುತ್ತಿದ್ದಾರೆ. ಆದರೆ ಇಂತಹ ತಂತ್ರಾಂಶಗಳ ಕಾರ್ಯಕ್ಷಮತೆಯ ಮೇಲೆ ನಾವು ಎಷ್ಟರ ಮಟ್ಟಿಗೆ ನಂಬಿಕೆ ಇಡಬಹುದು. ಹೀಗಾಗಿಯೇ ನಾವು ಇಂತಹ ಬಳಕೆದಾರರನ್ನು ಗುರಿಯಾಗಿಸಿಕೊಂಡು ನಮೋ ಆ್ಯಂಟಿ ವೈರಸ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ಸಂಪೂರ್ಣ ಸುರಕ್ಷಿತವಾಗಿದ್ದು, ಉತ್ಕೃಷ್ಟ ಮಟ್ಟದ ಸ್ಯಾನಿಂಗ್ ವ್ಯವಸ್ಥೆಯನ್ನು ಹೊಂದಿದೆ' ಎಂದು ಸಂಸ್ಥೆಯ ಸಿಇಒ ಅಭಿಷೇಕ್ ಗಗ್ನೇಜಾ ಹೇಳಿದ್ದಾರೆ.

ಇನ್ನು ನಮೋ ಹೆಸರಿನ ಆ್ಯಂಟಿ ವೈರಸ್ ಅಭಿವೃದ್ಧಿಪಡಿಸಿರುವ ಸಂಸ್ಥೆಯು ಬೇರಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧಹೊಂದಿಲ್ಲ ಎಂದು ಗಗ್ನೇಜಾ ಅವರು ಸ್ಪಷ್ಟಪಡಿಸಿದ್ದಾರೆ. 'ನಾವು ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ದೇಶದ ಜನತೆ ಪ್ರಸ್ತುತ ಸರ್ಕಾರದ ಮೇಲೆ ಅತೀವ ನಂಬಿಕೆ ಇಟ್ಟಿದ್ದಾರೆ. ನಾವು ನಮ್ಮ ತಂತ್ರಾಂಶದ ಮೂಲಕ ನರೇಂದ್ರ ಮೋದಿ ಅವರಿಗೆ ಈ ಸಂದೇಶ ರಾವಾನಿಸಲು ಇಚ್ಛಿಸುತ್ತೇವೆ' ಎಂದು ಗಗ್ನೇಜ್ ಹೇಳಿದ್ದಾರೆ.

2007ರಲ್ಲಿ ತಂತ್ರಾಂಶ ಅಭಿವೃದ್ಧಿಗೆ ಮುಂದಾಗಿದ್ದ ಸಂಸ್ಥೆಯಲ್ಲಿ ಒಟ್ಟು 7 ದೇಶಗಳ ಸುಮಾರು 500ಕ್ಕೂ ಅಧಿಕ ಸಾಫ್ಟ್ ವೇರ್ ಎಂಜಿನಿಯರ್‌ಗಳು ಕಾರ್ಯನಿರ್ವಹಿಸಿದ್ದಾರೆ. ಭಾರತ ಸೇರಿದಂತೆ ಅಮೆರಿಕ, ಯುಕೆ, ಜರ್ಮನಿ, ಕೆನಡಾ, ರುಮೇನಿಯಾ, ಚೀನಾ ಮತ್ತು ಸಿಂಗಾಪುರದ ಸಾಫ್ಟ್ ವೇರ್ ಎಂಜಿನಿಯರ್‌ಗಳು ತಂತ್ರಾಂಶಕ್ಕಾಗಿ ಶ್ರಮಿಸಿದ್ದಾರೆ.

ನಿಮಗೂ ನಮೋ ಆ್ಯಂಟಿ ವೈರಸ್ ತಂತ್ರಾಂಶ ಬೇಕಿದ್ದರೆ ಈ ವೆಬ್ ತಾಣಕ್ಕೆ ಭೇಟಿ ನೀಡಿ.. http://www.namoav.com/

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement