ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಂತರಾಷ್ಟ್ರೀಯ ಕಿರು ಚಿತ್ರೋತ್ಸವ ಸ್ಪರ್ಧೆಗೆ ಆಹ್ವಾನ

ಯುವ ಜನತೆಯನ್ನು ಪ್ರೋತ್ಸಾಹಿಸಲೆಂದು ಸುಚಿತ್ರ ಸಹಯೋಗದ ಮೂಲಕ..

Srinivasa Murthy VN
Updated On : 24 Jun 2014, 5:35 am

ಬೆಂಗಳೂರು: ಯುವ ಜನತೆಯನ್ನು ಪ್ರೋತ್ಸಾಹಿಸಲೆಂದು ಸುಚಿತ್ರ ಸಹಯೋಗದ ಮೂಲಕ ಅಂತರಾಷ್ಟ್ರೀಯ ಕಿರು ಚಿತ್ರೋತ್ಸವವನ್ನು ಆಯೋಜಿಸಲಾಗಿದ್ದು, ಕಾಲ್ಪನಿಕ ಕಿರುಚಿತ್ರಗಳಿಗೆ ಆಹ್ವಾನ ನೀಡಲಾಗಿದೆ.

ಆಗಸ್ಟ್ 22 ರಿಂದ 24 ರವರೆಗೆ ನಡೆಯುವ ಈ ಚಿತ್ರೋತ್ಸವಕ್ಕೆ ಭಾಷಾ ಮಿತಿಯಿಲ್ಲ. ಪ್ರಪಂಚದಲ್ಲಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರು ಭಾಗವಹಿಸ ಬಹುದಾಗಿದ್ದು, ಪ್ರವೇಶ ಶುಲ್ಕ ವಿದ್ಯಾರ್ಥಿಗಳಿಗೆ ಪ್ರತಿ ಚಿತ್ರಕ್ಕೆ 250 ರೂ ಹಾಗೂ ಇತರರಿಗೆ 500 ರೂಗಳನ್ನು ನಿಗದಿ ಪಡಿಸಲಾಗಿದೆ. ಆಸಕ್ತರು 30 ನಿಮಿಷದ ಒಳಗಿರುನ, 2013ರ ನಂತರ ತಯಾರಿಸಿದ ಹಾಗೂ ಇಂಗ್ಲೀಷ್‌ನಲ್ಲಿ ಉಪಶೀರ್ಷಿಕೆಗಳನ್ನು ನೀಡಿದ ತಮ್ಮ ಕಿರುಚಿತ್ರದ ಪ್ರತಿಯನ್ನು ಡಿವಿಡಿಯ ಮೂಲಕ ಆಗಸ್ಟ್ 2 ರ ಒಳಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಸುಚಿತ್ರಾ, ನಂ 36, 9ನೇ ಮುಖ್ಯ ರಸ್ತೆ, ಬಿ.ವಿ,ಕಾರಂತ್ ರಸ್ತೆ, ಬನಶಂಕರಿ 2ನೇ ಹಂತ, ಬೆಂ-01 ಅಥವಾ ಅಂತರ್ಜಾಲದ ಮೂಲಕ ತಮ್ಮ ಕಿರುಚಿತ್ರದ ಬಿಐಎಸ್‌ಎಫ್‌ಎಫ್ ವೆಬ್ ವಿಳಾಸಕ್ಕೆ ಲಿಂಕ್‌ನ್ನು ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ದೂ.ಸಂ-08026711785, ಮೊ-9845055034

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement