ಕವಿಗಳ ಗೀತೋತ್ಸವ
ಸುಗಮ ಸಂಗೀತ ಪರಿಷತ್ತು 'ಕವಿಯ ನೋಡಿ ಕವಿತೆ ಕೇಳಿ' ಎಂಬ ಶೀರ್ಷಿಕೆಯಡಿಯಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು...
ಸುಗಮ ಸಂಗೀತ ಪರಿಷತ್ತು 'ಕವಿಯ ನೋಡಿ ಕವಿತೆ ಕೇಳಿ' ಎಂಬ ಶೀರ್ಷಿಕೆಯಡಿಯಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದೇ ತಿಂಗಳ 29ರಂದು ಈ ಕಾರ್ಯಕ್ರಮ ನಡೆಯಲಿದೆ. 86ರ ವಸಂತೋತ್ಸವಕ್ಕೆ ಕಾಲಿಡಲಿರುವ ಶ್ರೇಷ್ಟ ಕವಿ ನಾಡೋಜ ಚೆನ್ನವೀರ ಕಣವಿರವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಆವರೇ ರಚಿಸಿರುವ ಗೀತೆಗಳನ್ನು ಕಲಾವಿದರ ಮೂಲಕ ಹಾಡಿಸಿ ನೇರವಾಗಿ ಕವಿಯ ಮೂಲಕವೇ ಆಶಯಗಳನ್ನು ತಿಳಿದುಕೊಳ್ಳಬಹುದಾಗಿದೆ. 70ನೇ ವಸಂತಕ್ಕೆ ಕಾಲಿಟ್ಟಿರುವ ನಾಡಿನ ಮತ್ತೋರ್ವ ಶ್ರೇಷ್ಟಕವಿ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿರವರಿಗೆ ಅಭಿನಂದನಾ ಸಮಾರಂಭ ಹಾಗೂ ಅವರ ರಚನೆಯ 'ಹೂವಿನ ದಳ' ಎಂಬ ಸಿ.ಡಿಯನ್ನು ಬಿಡುಗಡೆ ಮಾಡಲಾಗುತ್ತಿದೆ.
ಸ್ಥಳ : ಬೆಂಗಳೂರು ಗಾಯನ ಸಮಾಜ
ಸಮಯ : ಬೆ. 11.30