ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬದನೌ ಅತ್ಯಾಚಾರ ಪ್ರಕರಣ: ಯುವತಿಯರ ಪೋಷಕರಿಗೆ ಸುಳ್ಳುಪತ್ತೆ ಪರೀಕ್ಷೆ

ಉತ್ತರ ಪ್ರದೇಶದ ಬದನೌ ಗ್ರಾಮದ 2 ಯುವತಿಯರ ಸಾಮೂಹಿಕ..

Srinivasa Murthy VN
Updated On : 24 Jun 2014, 6:57 am

ಲಖನೌ: ಉತ್ತರ ಪ್ರದೇಶದ ಬದನೌ ಗ್ರಾಮದ ಇಬ್ಬರು ಯುವತಿಯರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಕ್ಕೊಳಗಾದ ಪೋಷಕರನ್ನು ಮಂಗಳವಾರ ಸುಳ್ಳುಪತ್ತೆ ಪರೀಕ್ಷೆಗೆ ಒಡ್ಡಲಾಗಿದೆ.

ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಿಕೊಂಡಿರುವ ಸಿಬಿಐ ವಿಶೇಷಾಧಿಕಾರಿಗಳು ಯುವತಿಯರ ಪೋಷಕರು ಸೇರಿದಂತೆ ಇವರ ಮತ್ತಿಬ್ಬರು ಸಂಬಂಧಿಕರ ಸುಳ್ಳುಪತ್ತೆ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಪ್ರಕರಣದ ಆರೋಪಿಗಳಾದ 5 ಯುವಕರನ್ನು ಕೂಡ ಸುಳ್ಳುಪತ್ತೆ ಪರೀಕ್ಷೆಗೆ ಒಡ್ಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳು ತಿಳಿಸಿರುವಂತೆ ವಿಚಾರಣೆ ವೇಳೆ ಪೋಷಕರು, 'ತಮ್ಮ ಮಕ್ಕಳು ನಾಪತ್ತೆಯಾದ ಕೂಡಲೇ ನಾವು ಸ್ಥಳೀಯ ಪೊಲೀಸರಿಗೆ ವಿಚಾರ ತಿಳಿಸಿದ್ದೆವು. ಆದರೆ ನಾವು ದಲಿತರಾದ ಕಾರಣ ಮತ್ತು ನಾವು ಶಂಕೆ ವ್ಯಕ್ತಪಡಿಸಿದ ಹುಡುಗನ ಕುಟುಂಬದವರು ಬಲಿಷ್ಟ ಯಾದವ ಸಮಾಜದವರಾದ್ದರಿಂದ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ' ಎಂದು ಹೇಳಿದ್ದಾರೆ.

ಇಡೀ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಬದನೌನಲ್ಲಿನ ಇಬ್ಬರು ಸಹೋದರಿಯರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಇಬ್ಬರು ಪೊಲೀಸರು ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣ ವಿಚಾರಣೆಯ ಮೇಲುಸ್ತುವಾರಿಯನ್ನು ಸಿಬಿಐ ಅಧಿಕಾರಿಗಳಿಗೆ ವಹಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement