ಇನ್ನು ಮೂರು ತಿಂಗಳು ಗ್ಯಾಸ್ ದರ ಏರಿಕೆ ಇಲ್ಲ
ಇತ್ತೀಚೆಗಷ್ಟೇ ರೈಲ್ವೆ ಪ್ರಯಾಣದರ ಏರಿಕೆ ಮಾಡಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದ್ದ ಕೇಂದ್ರ ಸರ್ಕಾರ ಇದೀಗ ಗ್ಯಾಸ್ ಬಳಕೆದಾರರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.
ನವದೆಹಲಿ: ಇತ್ತೀಚೆಗಷ್ಟೇ ರೈಲ್ವೆ ಪ್ರಯಾಣದರ ಏರಿಕೆ ಮಾಡಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದ್ದ ಕೇಂದ್ರ ಸರ್ಕಾರ ಇದೀಗ ಗ್ಯಾಸ್ ಬಳಕೆದಾರರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.
ಇನ್ನು 3 ತಿಂಗಳ ಕಾಲ ಗ್ಯಾಸ್ ದರ ಏರಿಕೆ ಇಲ್ಲ ಎನ್ನುವ ಮೂಲಕ ಸಿಲಿಂಡರ್ ದರ ಏರಿಕೆ ಕುರಿತು ಎದಿದ್ದ ಊಹಪೋಹಗಳಿಗೆ ಕೇಂದ್ರದ ಪೆಟ್ರೋಲಿಯಂ ಸಚಿವ ಧರ್ಮೇಂಧ್ರ ಪ್ರಧಾನ್ ತೆರೆ ಎಳೆದಿದ್ದಾರೆ.
ಈ ಹಿಂದೆ ಗ್ಯಾಸ್ ದರ ಮತ್ತು ಸೀಮೆಎಣ್ಣೆ ದರ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿತ್ತು. ಇದಕ್ಕೆ ಇಂಬು ನೀಡುವಂತೆ ನಿನ್ನೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯ ಮುಂದೆ ದರ ಏರಿಕೆ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಹೀಗಾಗಿ ಗ್ಯಾಸ್ ದರ ಏರಿಕೆಯಾಗಬುಹದು ಎಂದು ಹೇಳಲಾಗುತ್ತಿತ್ತು.
ಅಲ್ಲದೆ ಷೇರುಮಾರುಕಟ್ಟೆ ರುಪಾಯಿ ಮೌಲ್ಯ ಕುಸಿತಗೊಂಡಿದ್ದು ಕೂಡ ಗ್ಯಾಸ್ ಮತ್ತು ಸೀಮೆಎಣ್ಣೆ ದರ ಏರಿಕೆ ಊಹಾಪೋಹಗಳಿಗೆ ಆಸ್ಪದ ನೀಡಿದ್ದವು. ಆದರೆ ಇಂದು ಈ ಎಲ್ಲ ಗೊಂದಲಗಳಿಗೆ ತೆರೆ ಎಳೆದಿರುವ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ, ಬಳಿಕ ದರ ಏರಿಕೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ.
ಒಟ್ಟಾರೆ ರೈಲು ಪ್ರಯಾಣ ದರ ಏರಿಕೆಯಿಂದ ಕಂಗೆಟ್ಟಿದ್ದ ಸಾರ್ವಜವಿಕರಿಗೆ ಗ್ಯಾಸ್ ದರ ಏರಿಕೆಯಿಂದ ತಾತ್ಕಾಲಿಕ ರಿಲೀಫ್ ದೊರೆತಂತಾಗಿದೆ.
ತಜ್ಞರು ಏನೆನ್ನುತ್ತಾರೆ?
ಬೆಲೆಯನ್ನೇ ಏರಿಸದೇ ಇರುವುದಕ್ಕಿಂತ ಹಂತ ಹಂತವಾಗಿ ಬೆಲೆ ಏರಿಸುವುದೇ ಸೂಕ್ತ. ಸೀಮೆಎಣ್ಣೆ ದರ ತಿಂಗಳಿಗೆ 1 ಹೆಚ್ಚಳ ಸಮರ್ಥನೀಯ ಎನ್ನುತ್ತಾರೆ ತೈಲ ಮತ್ತು ಅನಿಲ ತಜ್ಞ ಕಿರಿತ್ ಪಾರಿಖ್. ಇದೇ ವೇಳೆ, ಎಲ್ಪಿಜಿ ಸಿಲಿಂಡರ್ನ ಪ್ರಸ್ತಾವಿತ ದರ ಹೆಚ್ಚಳವು ಅಗತ್ಯಕ್ಕಿಂತ ತುಂಬಾ ಕಡಿಮೆಯಾಯಿತು ಎಂದೂ ಹೇಳಿದ್ದಾರೆ ಪಾರಿಖ್.