ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗ್ರಾಹಕರಿಗೆ ಧವನಂ ಜ್ಯುವೆಲ್ಲರ್ಸ್ ವಂಚನೆ?

ಗ್ರಾಹಕರಿಗೆ ವಂಚನೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಬೆಂಗಳೂರಿನ ಧವನಂ..

Srinivasa Murthy VN
Updated On : 25 Jun 2014, 8:55 am

ಬೆಂಗಳೂರು: ಗ್ರಾಹಕರಿಗೆ ವಂಚನೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಬೆಂಗಳೂರಿನ ಧವನಂ ಜ್ಯುವೆಲರ್ಸ್ ಮಳಿಗೆ ವಿರುದ್ಧ ಗ್ರಾಹಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ನಲ್ಲಿರುವ ಧವನಂ ಜ್ಯುವೆಲ್ಲರಿ ಮಳಿಗೆ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮಳಿಗೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಗ್ರಾಹಕರ ಬಳಿ ಆಭರಣ ಪಡೆದ ಮಳಿಗೆ ಸಿಬ್ಬಂದಿ, ಆಭರಣ ವಾಪಸ್ ಮಾಡದೆ, ಹಣವನ್ನೂ ನೀಡದೆ ಜನರಿಗೆ ಮೋಸ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಮಳಿಗೆಯಲ್ಲಿ ಅಭರಣಗಳನ್ನು ಇಟ್ಟಿರುವ ಗ್ರಾಹಕರು ಕಂಗಾಲಾಗಿ ಮಳಿಗೆ ಸಿಬ್ಬಂಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೆ ತಮ್ಮ ಆಭರಣಗಳನ್ನು ನೀಡುವವರೆಗೂ ಮಳಿಗೆ ಬಿಟ್ಟು ತೆರಳುವುದಿಲ್ಲ ಎಂದು ಗ್ರಾಹಕರು ಆಗ್ರಹಿಸುತ್ತಿದ್ದು, ಮಳಿಗೆ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈವರೆಗೂ ಧವನಂ ಜ್ಯುವೆಲರ್ಸ್ ಸಿಬ್ಬಂದಿ ಸುಮಾರು 50 ಲಕ್ಷದಷ್ಟು ಆಭರಣ ಪಡೆದಿದ್ದು, ಆಭರಣವನ್ನು ಗ್ರಾಹಕರಿಗೆ ವಾಪಸ್ ಮಾಡಿಲ್ಲ ಎಂದು ಆರೋಪಿಸಲಾಗುತ್ತಿದೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಳಿಗೆ ಮಾಲೀಕರು, ಆಭರಣಗಳನ್ನು ಪರೀಕ್ಷೆ ಮಾಡಿಸಲು ಬೇರೆಡೆ ರವಾನಿಸಲಾಗಿದೆ. ಆಭರಣಗಳ ಪರೀಕ್ಷೆ ಬಳಿಕ ಅವುಗಳನ್ನು ಗ್ರಾಹಕರಿಗೆ ವಾಪಸ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಕರಣ ಕಮರ್ಷಿಯಲ್ ಸ್ಟ್ರೀಟ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಡಿ.ಸಿ.ಪಿ ಹರ್ಷ ಅವರು ತನಿಖೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ. ಅಲ್ಲದೆ ಗ್ರಾಹಕರ ಮತ್ತು ಮಳಿಗೆಯ ಮಾಲೀಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಗ್ರಾಹಕರ ಆಭರಣಗಳನ್ನು ಸುರಕ್ಷಿತವಾಗಿ ಹಿಂದಿರುಗಿಸುವ ಭರವಸೆ ನೀಡಿರುವ ಹರ್ಷಾ ಅವರು, ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಗ್ರಾಹಕರಿಗೆ ಸೂಚಿಸಿದ್ದಾರೆ. ಗ್ರಾಹಕರು ನೀಡಿದ ದಾಖಲೆಗಳನ್ನು ಮಳಿಗೆ ಸಿಬ್ಬಂದಿಗಳ ಬಳಿ ಇರುವ ದಾಖಲಾತಿಗಳೊಂದಿಗೆ ಪರಿಶೀಲಿಸಿ ಮಾಲೀಕರಿಗೆ ಆಭರಣಗಳನ್ನು ವಾಪಸ್ ಮಾಡಲಾಗುತ್ತದೆ ಎಂದು ಹೇಳಿದರು.

ಒಟ್ಟಾರೆ ಗ್ರಾಹಕರಿಂದ ಗಿಜಿಗುಡುತ್ತಿದ್ದ ಧವನಂ ಜ್ಯುವೆಲರ್ಸ್ ಇಂದು ಗೊಂದಲದ ಗೂಡಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement