ಆಸ್ಟ್ರೇಲಿಯನ್ ಸೂಪರ್ ಸಿರೀಸ್: ಫೈನಲ್‌ಗೆ ಸೈನಾ ಲಗ್ಗೆ
ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು..
ಕ್ಯಾನ್‌ಬೆರ್ರಾ: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಆಸ್ಟ್ರೇಲಿಯಿನ್ ಸೂಪರ್ ಸಿರೀಸ್‌ನ ಫೈನಲ್‌ಗೆ ಶನಿವಾರ ಲಗ್ಗೆ ಇಟ್ಟಿದ್ದಾರೆ.
ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೈನಾ ವಿಶ್ವದ ನಂ-2 ಆಟಗಾರ್ತಿ ಚೀನಾದ ವಾಂಗ್ ಶಿಕ್ಸಿಯಾನ್‌ರನ್ನು 21-19, 16-21, 21-15 ನೇರಸೆಟ್‌ಗಳ ಮೂಲಕ ಪರಾಭವಗೊಳಿಸುವ ಮೂಲಕ ಪಂದ್ಯಾವಳಿಯ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ. ಸುದೀರ್ಘ 1 ಗಂಟೆ 16 ನಿಮಿಷಗಳ ನಡೆದ ಮ್ಯಾರಥಾನ್ ಪಂದ್ಯದಲ್ಲಿ ಸೈನಾ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮೊರೆಹೋಗಿದ್ದರು.
ಬಹಳ ಪ್ರಯಾಸ ಪಟ್ಟು ಚೀನಾದ ವಾಂಗ್ ಶಿಕ್ಸಿಯಾನ್‌ರನ್ನು ಮಣಿಸಿದ ಸೈನಾ ಇದೀಗ ಈ ಹಿಂದಿನ ತಮ್ಮ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ. ಈ ಹಿಂದೆ ಶಿಕ್ಸಿಯಾನ್ ವಿರುದ್ಧದ ಎರಡು ಪಂದ್ಯದಲ್ಲಿ ಸೈನಾ ಸೋಲುಕಂಡಿದ್ದರು. ಇತ್ತೀಚೆಗಿನ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿಯೂ ಶಿಕ್ಸಿಯಾನ್ ವಿರುದ್ಧ ಸೈನಾ ಮುಖಭಂಗ ಅನುಭವಿಸಿದ್ದರು. ಇದೀಗ ತಮ್ಮ ಈ ಹಿಂದಿನ ಎರಡು ಪಂದ್ಯಗಳ ಸೋಲಿನ ಸೇಡನ್ನು ಆಸ್ಟ್ರೇಲಿಯನ್ ಸೂಪರ್ ಸಿರೀಸ್ ಪಂದ್ಯಾವಳಿಯಲ್ಲಿ ಸೈನಾ ತೀರಿಸಿಕೊಂಡಿದ್ದಾರೆ.
ಪ್ರಸ್ತುತ ವಿಶ್ವ ರ್ಯಾಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಸೈನಾ ಪ್ರಸಕ್ತ ಸರಣಿಯನ್ನು ಜಯಿಸಿದರೆ ಅಗ್ರ ಸ್ಥಾನಕ್ಕೇರುವ ಸಾಧ್ಯತೆ ಇದೆ.