ಸೈನಾ ಮುಡಿಗೆ ಆಸ್ಟ್ರೇಲಿಯನ್ ಸೂಪರ್ ಸಿರೀಸ್ ಗರಿ
ಭಾರತೀಯ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಭಾನುವಾರ ಆಸ್ಟೇಲಿಯನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಸಿಡ್ನಿ: ಭಾರತೀಯ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಭಾನುವಾರ ಆಸ್ಟೇಲಿಯನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ನಿನ್ನೆ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಚೀನಾದ ವಾಂಗ್ ಶಿಕ್ಸಿಯಾನ್‌ರನ್ನು ಮಣಿಸಿದ್ದ ಸೈನಾ ನೆಹ್ವಾಲ್ ಅವರು, ಫೈನಲ್‌ನಲ್ಲಿಯೂ ತಮ್ಮ ಅದ್ಭುತ ಆಟವನ್ನು ಮುಂದುವರೆಸಿದ್ದಾರೆ. ಫೈನಲ್‌ನಲ್ಲಿ ವಿಶ್ವದ 11 ಶ್ರೇಯಾಂಕದ ಆಟಗಾರ್ತಿ ಸ್ಪೈನ್‌ನ ಕರೋಲಿನಾ ಮರಿನ್ ಅವರನ್ನು 21-18, 21-11 ನೇರ ಸೆಟ್‌ಗಳಿಂದ ಸೋಲಿಸಿ, ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಭಾನುವಾರ ಸಿಡ್ನಿಯಲ್ಲಿ ನಡೆದ ಈ ಪಂದ್ಯವು ಕೇವಲ 43 ನಿರ್ಮಿಷಗಳಲ್ಲಿಯೇ ಮುಗಿದದ್ದು ಮತ್ತೊಂದು ವಿಶೇಷವಾಗಿತ್ತು. ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಪಾಲಿಗೆ ಆಸ್ಟ್ರೇಲಿಯನ್ ಸೂಪರ್ ಸೀರಿಸ್ ಪ್ರಶಸ್ತಿಯು ಈ ವರ್ಷದ 2ನೇ ಪ್ರಶಸ್ತಿಯಾಗಿದೆ. ಆಸ್ಟ್ರೇಲಿಯನ್ ಸೂಪರ್ ಸಿರೀಸ್ ಸರಣಿಯನ್ನು ಗೆಲ್ಲುವ ಮೂಲಕ ಪ್ರಶಸ್ತಿಯೊಂದಿಗೆ ಸೈನಾ ನೆಹ್ವಾಲ್ ಅವರು 56, 000 ಡಾಲರ್ ಮೌಲ್ಯದ ಬಹುಮಾನದ ಮೊತ್ತವನ್ನು ಪಡೆದುಕೊಂಡಿದ್ದಾರೆ.