ಏಷ್ಯಾಕಪ್: ಪಾಕಿಸ್ತಾನಕ್ಕೆ ಕೇವಲ 246ರನ್ ಗುರಿ ನೀಡಿದ ಭಾರತ
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಕೇವಲ 245ರನ್ ಗಳಿಸಿದ್ದು, ಪಾಕಿಸ್ತಾನಕ್ಕೆ ಗೆಲ್ಲಲು 246ರನ್ಗಳ ಗುರಿ ನೀಡಿದೆ.
ಢಾಕಾ: ಢಾಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಕೇವಲ 245ರನ್ ಗಳಿಸಿದ್ದು, ಪಾಕಿಸ್ತಾನಕ್ಕೆ ಗೆಲ್ಲಲು 246ರನ್ಗಳ ಗುರಿ ನೀಡಿದೆ.
ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ ಪಾಕಿಸ್ತಾನ ತಂಡ ಭಾರತೀಯ ದಾಂಡಿಗರ ಮೇಲೆ ಸವಾರಿ ಮಾಡಿತು. ಆರಂಭದಿಂದಲೂ ಕರಾರುವಕ್ಕಾದ ಬೌಲಿಂಗ್ ದಾಳಿ ಮಾಡಿದ ಪಾಕಿಸ್ತಾನ ಬೌಲರ್ಗಳು ಭಾರತವನ್ನು ಕೇವಲ 245ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 245ರನ್ಗಳನ್ನಷ್ಟೇ ಗಳಿಸಿತು.
ಭಾರತದ ಪರ ರೋಹಿತ್ ಶರ್ಮಾ (56 ರನ್, 58 ಎಸೆತ), ಅಂಬಾಟಿ ರಾಯುಡು (58 ರನ್, 62 ಎಸೆತ) ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ (52 ರನ್, 49 ಎಸೆತ) ಅವರನ್ನು ಹೊರತು ಪಡಿಸಿದರೆ ಬೇರಾವ ಆಟಗಾರರು ಕೂಡ ಉತ್ತಮ ಪ್ರದರ್ಶನ ತೋರಲಿಲ್ಲ. ನಾಯಕ ವಿರಾಟ್ ಕೊಹ್ಲಿ ಕೂಡ ಕೇವಲ 5 ರನ್ಗಳಿಗೆ ನಿರ್ಗಮಿಸುವುದರೊಂದಿಗೆ ನಿರಾಸೆ ಮೂಡಿಸಿದರು. ಅಂತಿಮವಾಗಿ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 245ರನ್ ಗಳಿಸಿತು.
ಪಾಕಿಸ್ತಾನ ಪರ ಉತ್ತಮವಾಗಿ ಬೌಲಿಂಗ್ ಮಾಡಿದ ಸ್ಪಿನ್ನರ್ ಸಯ್ಯೀದ್ ಅಜ್ಮಲ್ 40 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು. ಉಳಿದಂತೆ ಮಹಮದ್ ಹಫೀಜ್ 2 ವಿಕೆಟ್, ಮಹಮದ್ ತಲಾ 2 ವಿಕೆಟ್ ಮತ್ತು ಉಮರ್ ಗುಲ್ 1 ವಿಕೆಟ್ ಪಡೆದರು.
ಈಗಾಗಲೇ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿರುವ ಭಾರತ ಈ ಪಂದ್ಯವನ್ನು ಕೂಡ ಕೈ ಚೆಲ್ಲಿದರೆ ಸರಣಿಯಿಂದ ಬಹುತೇಕ ಹೊರಬೀಳುತ್ತದೆ.