ಮಾ. 9ರಂದು 'ಸಂಕಲ್ಪ' ಸಿನಿಮಾ ವಿಶೇಷ ಪ್ರದರ್ಶನ
ದಿ. ಸಿ.ಆರ್.ಸಿಂಹ ಅವರ ರಾಜ್ಯ ಪ್ರಶಸ್ತಿ ವಿಜೇತ 'ಸಂಕಲ್ಪ' ಚಿತ್ರದ ವಿಶೇಷ ಪ್ರದರ್ಶನವನ್ನು ಇದೇ ಮಾರ್ಚ್ 9ರಂದು ಕೆ.ವಿ.ಸುಬ್ಬಣ್ಣ ಆಪ್ತರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಬೆಂಗಳೂರು: ನಟ, ನಿರ್ದೇಶಕ, ರಂಗಕರ್ಮಿ ದಿ. ಸಿ.ಆರ್.ಸಿಂಹ ಅವರ ರಾಜ್ಯ ಪ್ರಶಸ್ತಿ ವಿಜೇತ 'ಸಂಕಲ್ಪ' ಚಿತ್ರದ ವಿಶೇಷ ಪ್ರದರ್ಶನವನ್ನು ಇದೇ ಮಾರ್ಚ್ 9ರಂದು ಕೆ.ವಿ.ಸುಬ್ಬಣ್ಣ ಆಪ್ತರಂಗಮಂದಿರದಲ್ಲಿ ಆಯೋಜಿಸಲಾಗಿದೆ.
1973ರಲ್ಲಿ ತೆರೆಕಂಡಿದ್ದ ಈ ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿತ್ತು. ಪಿ.ನಂಜರಾಜ ಅರಸ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಸಿ.ಆರ್.ಸಿಂಹ ಮತ್ತು ಅನಂತ್ ನಾಗ್ ಅವರು ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಕೆ.ವಿ.ಸುಬ್ಬಣ್ಣ ಆಪ್ತರಂಗಮಂದಿರ ಅಂಡ್ ಫಿಲ್ಮ್ ಸ್ಟಡಿ ಸರ್ಕಲ್ ಸಹಯೋಗದಲ್ಲಿ ಇದೇ ಮಾರ್ಚ್ 9 ರಂದು ಸಂಜೆ 4.30ಕ್ಕೆ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಸ್ಥಳ:-
ಕೆ.ವಿ.ಸುಬ್ಣಣ್ಣ ಆಪ್ತರಂಗಮಂದಿರ
ನಂ-151, 7ನೇ ಅಡ್ಡರಸ್ತೆ
ಟೀಚರ್ಸ್ ಕಾಲೋನಿ 1ನೇ ಹಂತ,
ದಯಾನಂದ ಸಾಗರ ಕಾಲೇಜು ಬಳಿ
ವಸುಧಭವನ ಎದುರು
ಬೆಂಗಳೂರು: 50078
ಸಂಪರ್ಕ ಸಂಖ್ಯೆ: 9964 152999 (ಗೋಪಿನಾಥ್)