ಲೋಕ ಸಮರ: ಜೆಡಿಎಸ್ ಮೊದಲ ಪಟ್ಟಿ ಸಿದ್ಧ
ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಜ್ಯಾತ್ಯಾತೀತ ಜನತಾದಳ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿದ್ದಪಡಿಸಿದ್ದು, ಯಾವುದೇ ಕ್ಷಣದಲ್ಲಿ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಬೆಂಗಳೂರು: ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಜ್ಯಾತ್ಯಾತೀತ ಜನತಾದಳ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿದ್ದಪಡಿಸಿದ್ದು, ಯಾವುದೇ ಕ್ಷಣದಲ್ಲಿ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಲಭ್ಯ ಮಾಹಿತಿಗಳ ಪ್ರಕಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹಾಸನ ಕ್ಷೇತ್ರದಿಂದ, ಪಕ್ಷದ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನಿರೀಕ್ಷೆಯಂತೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿ ಹಾಗೂ ಖ್ಯಾತ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆಗಿಳಿಯಲಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ದೇವೇಗೌಡರ ಸೊಸೆ ಅನಿತಾ ಕುಮಾರ ಸ್ವಾಮಿ ಅವರು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಜೆಡಿಎಸ್ ಸಿದ್ದಗೊಳಿಸಿರುವ ಪಟ್ಟಿಯಲ್ಲಿ ಈ ಕ್ಷೇತ್ರದಿಂದ ಶ್ರೀನಿವಾಸಮೂರ್ತಿ ಅವರ ಹೆಸರು ಸೇರ್ಪಡೆಯಾಗಿದೆ.
ಜೆಡಿಎಸ್ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಭ್ಯರ್ಥಿಗಳ ವಿವರ ಇಂತಿದೆ.
ಹಾಸನ-ಎಚ್.ಡಿ.ದೇವೇಗೌಡ
ತುಮಕೂರು-ಎ.ಕೃಷ್ಣಪ್ಪ
ಶಿವಮೊಗ್ಗ-ಗೀತಾ ಶಿವರಾಜ್ ಕುಮಾರ್
ಮೈಸೂರು-ಪ್ರೋ.ಮಲ್ಲಿಕಾರ್ಜುನಪ್ಪ
ಚಾಮರಾಜನಗರ-ಎಂ.ಶಿವಣ್ಣ
ಬೀದರ್-ಬಂಡೆಪ್ಪ ಕಾಂಶಂಪುರ್
ಚಿತ್ರದುರ್ಗ-ಗೂಳಿಹಟ್ಟಿ ಶೇಖರ್
ಕಾರವಾರ-ಶಿವಾನಂದ ನಾಯಕ್
ಕೋಲಾರ-ಕೇಶವ
ಚಿಕ್ಕಬಳ್ಳಾಪುರ-ಶ್ರೀನಿವಾಸ ಮೂರ್ತಿ
ಮಂಡ್ಯ-ಪುಟ್ಟರಾಜು ಅಥವಾ ಡಿ.ಸಿ.ಸಂತೋಷ್
ಬೆಂಗಳೂರು ಗ್ರಾಮಾಂತರ-ಪ್ರಭಾಕರ ರೆಡ್ಡಿ ಅಥವಾ ಅಪ್ಪಾಜಿ