ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪವಿತ್ರ ಪುಸ್ತಕಕ್ಕೆ ಅಪಚಾರ: ಪಾಕ್ ನಲ್ಲಿ ಹಿಂದೂ ದೇವಾಲಯಕ್ಕೆ ಬೆಂಕಿ

ಪವಿತ್ರ ಪುಸ್ತಕಕ್ಕೆ ಅಪಚಾರ ಮಾಡಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನದ ಹಿಂದೂ ದೇವಾಲಯಕ್ಕೆ ಬೆಂಕಿ ಇಟ್ಟಿರುವ ಘಟನೆ ಶನಿವಾರ ತಡರಾತ್ರಿಯಲ್ಲಿ ನಡೆದಿದೆ.

Srinivasa Murthy VN
Updated On : 16 Mar 2014, 3:05 am

ಲಾರ್ಖನಾ: ಪವಿತ್ರ ಪುಸ್ತಕಕ್ಕೆ ಅಪಚಾರ ಮಾಡಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನದ ಹಿಂದೂ ದೇವಾಲಯಕ್ಕೆ ಬೆಂಕಿ ಇಟ್ಟಿರುವ ಘಟನೆ ಶನಿವಾರ ತಡರಾತ್ರಿಯಲ್ಲಿ ನಡೆದಿದೆ.

ಪಾಕ್ ಆಕ್ರಮಿತ ಪಂಜಾಬ್ ಪ್ರಾಂತ್ಯ ಲಾರ್ಖನಾದಲ್ಲಿರುವ ಜಿನ್ನಾ ಬಾಗ್‌ನಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಪವಿತ್ರ ಪುಸ್ತಕವನ್ನು ಹರಿದುಹಾಕಿದ್ದಾನೆ ಎಂಬ ವದಂತಿ ಹಬ್ಬುತ್ತಿದ್ದಂತೆಯೇ ಲಾರ್ಖನಾದಲ್ಲಿರುವ ಧರ್ಮಶಾಲಾ ಹಿಂದೂ ದೇವಾಲಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಿಮಿಸಿರುವ ಪೊಲೀಸರುವ ಆರೋಪಿತ ವ್ಯಕ್ತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳದಲ್ಲಿ ಪ್ರತಿಭಟನೆ ತೀವ್ರ ಗೊಳ್ಳುತ್ತಿದ್ದಂತೆಯೇ ಮುನ್ನೆಚ್ಚರಿಕಾ ಕ್ರಮವಾಗಿ ಲಾರ್ಖನಾ ಸೇರಿದಂತೆ ಸುತ್ತಮುತ್ತಲಿನ ನಗರಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ಸ್ಥಳೀಯ ಹಿಂದೂ ಸಮುದಾಯ ಸಂಘಟನೆಯ ಮುಖಂಡೆ ಕಲ್ಪನಾ ದೇವಿ ಅವರು, ಆರೋಪಿತ ವ್ಯಕ್ತಿ ಮಧ್ಯನವ್ಯಸನಿಯಾಗಿದ್ದ, ಅಲ್ಲದೆ ಆತ ಮತ್ತು ಬರುವಂತಹ ನಿಷೇಧಿತ ಔಷಧಿಗಳ ದಾಸನಾಗಿದ್ದ. ಆಮತ್ತಿನಲ್ಲಿ ಆತ ಹಾಗೆ ಮಾಡಿರಬಹುದು. ನಾವು ಯಾವುದೇ ಸಮುದಾಯ ಅಥವಾ ಧರ್ಮವನ್ನು ನಿಂದಿಸುವ ಕಾರ್ಯ ಮಾಡಿಲ್ಲ. ಅಂತಹ ಆಲೋಚನೆಗಳೂ ಕೂಡ ನಮ್ಮಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಘಟನೆಯಿಂದ ತೀವ್ರ ಆಕ್ರೋಶಗೊಂಡಿರುವ ಪ್ರತಿಭಟನಾಕಾರರು ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದೀಗ ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಘಟನಾ ಸ್ಥಳದಲ್ಲಿ ಕರ್ಫ್ಯೂ ಹೇರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement