ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಖ್ಯಾತ ಬಾಲಿವುಡ್ ನಟಿ ಬಾಬಿ ನಂದಾ ವಿಧಿವಶ

ಖ್ಯಾತ ಬಾಲಿವುಡ್ ನಟಿ ಬಾಬಿ ನಂದಾ ಅವರು ವಿಧಿವಶರಾಗಿದ್ದು, ಅವರಿಗೆ 75 ವರ್ಷ ವಯಸ್ಸಾಗಿತ್ತು.

Srinivasa Murthy VN
Updated On : 25 Mar 2014, 3:35 am

ಮುಂಬೈ: ಖ್ಯಾತ ಬಾಲಿವುಡ್ ನಟಿ ಬಾಬಿ ನಂದಾ ಅವರು ವಿಧಿವಶರಾಗಿದ್ದು, ಅವರಿಗೆ 75 ವರ್ಷ ವಯಸ್ಸಾಗಿತ್ತು.

ಮಂಗಳವಾರ ಬೆಳಗ್ಗೆ 9.15ರಲ್ಲಿ ಬಾಬಿನಂದಾ ಅವರು ಕೊನೆಯುಸಿರೆಳೆದಿದ್ದು, ಮುಂಬೈನ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ದರ್ಶನಕ್ಕೆ ಇಡಲಾಗಿದೆ.

1939ರ ಜನವರಿ 8 ರಂದು ಜನಿಸಿದ ಬಾಬಿ ನಂದಾ ಅವರು, ತಮ್ಮ ಚಿಕ್ಕ ವಯಸ್ಸಿನಲ್ಲಿಯೇ (8 ವರ್ಷ) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅನಂತರ ತಂಗಿ ಮತ್ತು ಅತ್ತಿಗೆ ಪಾತ್ರಗಳ ಮೂಲಕವಾಗಿ ಹೆಚ್ಚು ಖ್ಯಾತಿಗಳಿಸಿದರು. ಅನಂತರ ಗುಮ್ ನಾಮ್, ಜಬ್ ಜಬ್ ಫೂಲ್ ಖಿಲೆ, ಕಾಲಾ ಬಜಾರ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದ್ದರು.

ಬಾಬಿನಂದಾ ಅವರ ಸಾವಿಗೆ ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದ್ದು, ಮುಂಬೈನಲ್ಲಿರುವ ನಂದಾ ಅವರ ನಿವಾಸದತ್ತ ಬಾಲಿವುಡ್ ಗಣ್ಯರ ದಂಡು ಧಾವಿಸುತ್ತಿದೆ. ಇಂದು ಸಂಜೆ ಬಾಬಿ ನಂದಾ ಅವರ ಅಂತಿಮ ವಿಧಿವಿಧಾನ ನಡೆಯಲಿದೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement