ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಕ್ತಾರ್ ಅಬ್ಬಾಸ್ ನಖ್ವಿ ವಿರುದ್ಧ ಮಾನನಷ್ಟ ಮೊಕದ್ದಮೆ

ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ವಿರುದ್ಧ ಜೆಡಿಯು ಪಕ್ಷದ ಉಚ್ಚಾಟಿತ ಮುಖಂಡ ಸಬ್ಬೀರ್ ಅಲಿ ಅವರು ಮಾನನಷ್ಟ ಮೊಕದ್ದಮೆ ಸಲ್ಲಿಸಲು ಮುಂದಾಗಿದ್ದಾರೆ.

Srinivasa Murthy VN
Updated On : 30 Mar 2014, 7:55 am

ನವದೆಹಲಿ: ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ವಿರುದ್ಧ ಜೆಡಿಯು ಪಕ್ಷದ ಉಚ್ಚಾಟಿತ ಮುಖಂಡ ಸಬ್ಬೀರ್ ಅಲಿ ಅವರು ಮಾನನಷ್ಟ ಮೊಕದ್ದಮೆ ಸಲ್ಲಿಸಲು ಮುಂದಾಗಿದ್ದಾರೆ.

ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ತಮ್ಮ ವಿರುದ್ಧ ಅವಮಾನಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜೆಡಿಯು ಉಚ್ಚಾಟಿತ ಮುಖಂಡ ಸಬ್ಬೀರ್ ಅಲಿ ಅವರು ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.

ಈ ಹಿಂದೆ ಜೆಡಿಯು ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಸಬ್ಬೀರ್ ಅಲಿ ಅವರು ಬಿಜೆಪಿ ಸೇರಲು ಮುಂದಾಗಿದ್ದರು. ಈ ವೇಳೆ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಬಿಹಾರ ಬಿಜೆಪಿ ಘಟಕದ ನಿರ್ಧಾರವನ್ನು ವಿರೋಧಿಸಿದ್ದರು. ಅಲ್ಲದೆ ಕುಖ್ಯಾತ ಭಯೋತ್ಪಾದಕ ಇಂಡಿಯನ್ ಮುಂಜಾಹಿದ್ದೀನ್ ಸಂಸ್ಥಾಪಕ ಯಾಸಿನ್ ಭಟ್ಕಳ್‌ನೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಿದ್ದರು.

ನಖ್ವಿ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಸಬ್ಬೀರ್ ಅಲಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾಗಿದ್ದಾರೆ. ಅಲ್ಲದೆ ತಮ್ಮ ಬಿಜೆಪಿ ಸೇರ್ಪಡೆಯನ್ನು ನಖ್ವಿ ಅವರೇ ದುರುದ್ದೇಶಪೂರ್ವಕವಾಗಿ ತಡೆದರು ಎಂದು ಆರೋಪಿಸಿದ್ದಾರೆ. ಆದರೆ ತಮ್ಮನ್ನು ಬಿಜೆಪಿಗೆ ಸೇರಿಸಿಕೊಂಡು ನಂತರ ಸೇರ್ಪಡೆಯನ್ನು ತಡೆಹಿಡಿದ ಬಿಜೆಪಿ ಮುಖಂಡರ ನಿರ್ಧಾರದ ಕುರಿತು ಮಾತನಾಡಿದ ಸಬ್ಬೀರ್ ಅಲಿ ಅವರು, ತಮ್ಮನ್ನು ಸೇರಿಸಿಕೊಳ್ಳುವುದು ಬಿಡುವುದು ಬಿಜೆಪಿ ಪಕ್ಷದ ನಿರ್ಧಾರವಾಗಿದ್ದು, ಆ ಬಗ್ಗೆ ತಾವು ಹೇಳಿಕೆ ನೀಡುವುದಿಲ್ಲ ಎಂದರು.

ಈ ಹಿಂದೆ ಬಿಹಾರ ಬಿಜೆಪಿ ಘಟಕ ಸಬ್ಬೀರ್ ಅಲಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದರ ಬಗ್ಗೆ ಕಳೆದ ಶುಕ್ರವಾರ ಟ್ವೀಟ್ ಮಾಡಿದ್ದ ಮುಕ್ತಾರ್ ಅಬ್ಬಾಸ್ ನಖ್ವಿ ಅವರು, ಯಾಸಿನ್ ಭಟ್ಕಳ್ ಸ್ನೇಹಿತ ಸಬ್ಬೀರ್ ಅಲಿ ಬಿಜೆಪಿ ಸೇರ್ಪಡೆಗೊಂಡಿದ್ದಾನೆ. ಶೀಘ್ರದಲ್ಲಿಯೇ ದಾವೂದ್ ಇಬ್ರಾಹಿ ಕೂಡ ಪಕ್ಷವನ್ನು ಸೇರಿಕೊಳ್ಳಬಹುದು ಎಂದು ಮಾರ್ಮಿಕವಾಗಿ ಸಬ್ಬೀರ್ ಅಲಿ ಅವರ ಪಕ್ಷ ಸೇರ್ಪಡೆಯನ್ನು ತೀವ್ರವಾಗಿ ವಿರೋಧಿಸಿದ್ದರು.

ನಖ್ವಿ ಅವರ ಈ ಟ್ವೀಟನ್ನೇ ಆಧಾರವಾಗಿಟ್ಟುಕೊಂಡು ಸಬ್ಬೀರ್ ಅಲಿ ಮುಕ್ತಾರ್ ನಖ್ವಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement