ವಿಮಾನ ಅಪಘಾತ: ಅಮೆರಿಕಕ್ಕೆ ಬ್ಲಾಕ್ ಬಾಕ್ಸ್ ರವಾನೆ
ಕಳೆದ ಶುಕ್ರವಾರ ಗ್ವಾಲಿಯರ್‌ನಲ್ಲಿ ಅಪಘಾತಕ್ಕೀಡಾಗಿದ್ದ ರಕ್ಷಣಾ ಪಡೆಯ ವಿಮಾನದ ಬ್ಲಾಕ್ ಬಾಕ್ಸ್ ಅನ್ನು ಅಮೆರಿಕಕ್ಕೆ ರವಾನಿಸಲಾಗಿದೆ.
ನವದೆಹಲಿ: ಕಳೆದ ಶುಕ್ರವಾರ ಗ್ವಾಲಿಯರ್‌ನಲ್ಲಿ ಅಪಘಾತಕ್ಕೀಡಾಗಿದ್ದ ರಕ್ಷಣಾ ಪಡೆಯ ವಿಮಾನದ ಬ್ಲಾಕ್ ಬಾಕ್ಸ್ ಅನ್ನು ಅಮೆರಿಕಕ್ಕೆ ರವಾನಿಸಲಾಗಿದೆ.
ಮೇಲ್ನೋಟಕ್ಕೆ ತಾಂತ್ರಿಕ ದೋಷದಿಂದ ವಿಮಾನ ಪತನವಾಗಿರುವ ಸಾಧ್ಯತೆ ಇದ್ದರೂ ಕೂಡ ಹೆಚ್ಚಿನ ಮಾಹಿತಿ ಪಡೆಯಲು ಬ್ಲಾಕ್ ಬಾಕ್ಸ್‌ನಲ್ಲಿ ದಾಖಲಾಗಿರುವ ಅಂಶಗಳನ್ನು ಡಿಕೋಡ್ ಮಾಡಲು ಅಮೆರಿಕಕ್ಕೆ ರವಾನಿಸಲಾಗಿದೆ. ವಿಮಾನದ ನಿರ್ಮಾಣ ಸಂಸ್ಥೆಯ ಲಾಕ್‌ಹೀಡ್ ಮಾರ್ಟಿನ್ ಅವರು ಬ್ಲಾಕ್‌ಬಾಕ್ಸ್‌ನಲ್ಲಿರುವ ದಾಖಲೆಗಳನ್ನು ಡಿಕೋಡ್ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬ್ಲಾಕ್ ಬಾಕ್ಸ್‌ನಲ್ಲಿರುವ ಯಾವುದೇ ಅಂಶಗಳು ಮತ್ತು ದಾಖಲೆ ನಾಶವಾಗಬಾರದೆಂದು ಅದನ್ನು ಅಮೆರಿಕಕ್ಕೆ ರವಾನಿಸಲಾಗಿದೆ. ವಿಮಾನದ ನಿರ್ಮಾಣ ಸಂಸ್ಥೆಯ ಸದಸ್ಯರ ಮೂಲಕವಾಗಿ ಬ್ಲಾಕ್ ಬಾಕ್ಸ್ ಅನ್ನು ಅಮೆರಿಕಕ್ಕೆ ರವಾನಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಶುಕ್ರವಾರ ಬೆಳಗ್ಗೆ ಟೇಕ್ ಆಫ್ ಆಗಿದ್ದ ಹರ್ಕ್ಯುಲೆಸ್ ಸಿ-130 ಜೆ ವಿಮಾನ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಪತನವಾಗಿತ್ತು. ಪೈಲಟ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 5 ಸಿಬ್ಬಂದಿಗಳು ಮೃತಪಟ್ಟಿದ್ದರು. ಗಡಿಯಲ್ಲಿನ ವಿಶೇಷ ಕಾರ್ಯಾಚರಣೆಗೆ ಬಳಸಲಾಗುತ್ತಿದ್ದ ಈ ವಿಮಾನವನ್ನು ಇತ್ತೀಚೆಗೆ ಮಲೇಷ್ಯಾ ಏರ್‌ಲೈನ್ಸ್ ವಿಮಾನ ನಾಪತ್ತೆ ಕಾರ್ಯಾಚರಣೆಗೂ ಬಳಸಲಾಗಿತ್ತು. ಇದಕ್ಕೂ ಮೊದಲು ಉತ್ತರಾಖಂಡ್ ಪ್ರವಾಹದ ಸಂದರ್ಭದಲ್ಲಿಯೂ ನಿರಾಶ್ರಿತರ ಸ್ಥಳಾಂತರಕ್ಕಾಗಿ ಇದೇ ವಿಮಾನವನ್ನು ಬಳಸಲಾಗಿತ್ತು.