ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಭಟ್ಕಳ್ ಜೊತೆ ನಂಟು ಆರೋಪ: ಸಾಬಿರ್ ಅಲಿ ಪತ್ನಿಯಿಂದ ಧರಣಿ

ಬಿಜೆಪಿ ವಕ್ತಾರ ಮುಕ್ತಾರ್ ಅಬ್ಬಾಸ್ ನಖ್ವಿ ಅವರ ನಿವಾಸದೆದುರು ಸಾಬಿರ್ ಅಲಿ ಅವರ ಪತ್ನಿ ಯಾಸ್ಮಿನ್ ಅಲಿ ಅವರು ಧರಣಿ ನಡೆಸುತ್ತಿದ್ದು, ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿದ್ದಾರೆ.

Srinivasa Murthy VN
Updated On : 31 Mar 2014, 3:38 am

ನವದೆಹಲಿ: ಬಿಜೆಪಿ ವಕ್ತಾರ ಮುಕ್ತಾರ್ ಅಬ್ಬಾಸ್ ನಖ್ವಿ ಅವರ ನಿವಾಸದೆದುರು ಸಾಬಿರ್ ಅಲಿ ಅವರ ಪತ್ನಿ ಯಾಸ್ಮಿನ್ ಅಲಿ ಅವರು ಧರಣಿ ನಡೆಸುತ್ತಿದ್ದು, ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿದ್ದಾರೆ.

ಈ ಮೊದಲು ಜೆಡಿಯು ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಸಾಬಿರ್ ಅಲಿ ಅವರನ್ನು ಬಿಹಾರ ಬಿಜೆಪಿ ಘಟಕ ಪಕ್ಷಕ್ಕೆ ಸೇರಿಸಿಕೊಂಡಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಬಿಜೆಪಿ ವಕ್ತಾರ ಸಾಬೀರ್ ಅಲಿ ಅವರು, ಯಾಸಿನ್ ಭಟ್ಕಳ್ ಸ್ನೇಹಿತ ಸಬ್ಬೀರ್ ಅಲಿ ಬಿಜೆಪಿ ಸೇರ್ಪಡೆಗೊಂಡಿದ್ದಾನೆ. ಶೀಘ್ರದಲ್ಲಿಯೇ ದಾವೂದ್ ಇಬ್ರಾಹಿ ಕೂಡ ಪಕ್ಷವನ್ನು ಸೇರಿಕೊಳ್ಳಬಹುದು ಎಂದು ಟ್ವೀಟ್ ಮಾಡಿದ್ದರು. ಸಾಬೀರ್ ಅಲಿ ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಅದನ್ನು ಸ್ಥಗಿತಗೊಳಿಸಲಾಯಿತು.

ನಿನ್ನೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಕ್ತಾರ್ ಅಬ್ಬಾಸ್ ನಖ್ವಿ ಅವರ ವಿರುದ್ಧ ಸಾಬಿರ್ ಅಲಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದೀಗ ಸಾಬಿರ್ ಅಲಿ ಪತ್ನಿ ಯಾಸ್ಮಿನ್ ಅಲಿ ಅವರು ನವದೆಹಲಿಯಲ್ಲಿರುವ ಮುಕ್ತಾರ್ ಅಬ್ಬಾಸ್ ನಖ್ವಿ ಅವರ ನಿವಾಸದೆದುರು ಧರಣಿ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement