ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಿನ್ಹಾ ಆರೋಪ ನಿರಾಧಾರ: ಚಿದಂಬರಂ

ಬಿಜೆಪಿ ಹಿರಿಯ ಮುಖಂಡ ಯಶ್ವಂತ್ ಸಿನ್ಹಾ ಅವರು ಮಾಡಿದ್ದ ಗಂಭೀರ ಆರೋಪಗಳ ಕುರಿತು..

Srinivasa Murthy VN
Updated On : 1 Apr 2014, 11:33 am

ನವದೆಹಲಿ: ಬಿಜೆಪಿ ಹಿರಿಯ ಮುಖಂಡ ಯಶ್ವಂತ್  ಸಿನ್ಹಾ ಅವರು ಮಾಡಿದ್ದ ಗಂಭೀರ ಆರೋಪಗಳ ಕುರಿತು ಸುದ್ದಿಗೋಷ್ಟಿ ನಡೆಸಿದ ಚಿದಂಬರಂ ಅವರು ತಮ್ಮ ವಿರುದ್ಧದ ಆರೋಪಗಳು ನಿರಾಧಾರ ಎಂದು ಹೇಳಿದರು.

ಯಶ್ವಂತ್ ಸಿನ್ಹಾ ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ದೇಶದ ಆರ್ಥಿಕತೆ ಸುಭದ್ರವಾಗಿದ್ದು, ಆರ್ಥಿಕ ಕುಸಿತದ ಭೀತಿ ಇಲ್ಲ. ಮಾರುಕಟ್ಟೆ ಸ್ಥಿರವಾಗಿದ್ದು, ಆತಂಕ ಪಡುವ ಯಾವುದೇ ಅವಶ್ಯಕತೆಗಳಿಲ್ಲ ಎಂದು ಚಿದಂಬರಂ ಹೇಳಿದ್ದಾರೆ.

'ಕಳೆದ 10 ವರ್ಷಗಳಲ್ಲಿ ದೇಶದ ಆರ್ಥಿಕ ನೀತಿಗಳಲ್ಲಿ ಕಾಂಗ್ರೆಸ್ ಆಮೂಲಾಗ್ರ ಬದಾಲವಣೆಗಳನ್ನು ತಂದಿದ್ದು, ಇದರ ಪರಿಣಾಮವಾಗಿಯೇ ಇಂದು ದೇಶದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ. ಆರ್ಥಿಕ ಸಂಕಷ್ಟದಲ್ಲಿಯೂ ಸೂಕ್ತ ಕ್ರಮಗಳಿಂದ ಸ್ಥಿರತೆ ಕಾಪಾಡಲಾಗಿದೆ. ನಿಮಗೇನಾದರೂ ಈ ಬಗ್ಗೆ ಅನುಮಾನಗಳಿದ್ದರೆ ದಾಖಲೆಗಳನ್ನು ಪರಿಶೀಲಿಸಬಹುದು. ಆರ್ಥಿಕ ಸಂಕಷ್ಟದಿಂದ ಹೊರಬಂದ ಬಗ್ಗೆ ನೀವು ಪರಿಶೀಲಿಸಬಹುದು. 2007 ಮತ್ತು 2008ರ ಸಾಲಿನಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಪ್ರಗತಿ ಕಂಡಿದೆ. ಯುಪಿಎ ಸರ್ಕಾರದ ಆರ್ಥಿಕ ನೀತಿಗಳು ಯಾವುದೋ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೇ ದೇಶದ ಪ್ರತಿಯೊಬ್ಬ ನಾಗರೀಕನ ಅಭಿವೃದ್ದಿಯನ್ನು ಗಣನೆಗೆ ತೆಗೆದುಕೊಂಡು ರಚಿಸಲಾಗಿದೆ'.

'ನನ್ನ ಬಗೆಗಿನ ಯಶ್ವಂತ್ ಸಿನ್ಹಾ ಅವರ ಆರೋಪ ನಿರಾಧಾರವಾಗಿದ್ದು, ಬಿಜೆಪಿ ಹಿರಿಯ ಮುಖಂಡರಾದ ಸಿನ್ಹಾ ಅವರು ಇಂತಹ ಹುಡುಗಾಟದ ಆರೋಪಗಳನ್ನು ಮಾಡಬಾರದು' ಎಂದು ಚಿದಂಬರಂ ಹೇಳಿದರು.

ಸಿನ್ಹಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದ ಕೂಡಲೇ ಮಾರುಕಟ್ಟೆ ಏರಿತು
ಇದೇ ವೇಳೆ ಸಿನ್ಹಾ ಅವರನ್ನು ಪರೋಕ್ಷವಾಗಿ ಲೇವಡಿ ಮಾಡಿರುವ ಚಿದಂಬರಂ ಅವರು ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಯಶವಂತ್ ಸಿನ್ಹಾ ಅವರು ವಿತ್ತ ಸಚಿವರಾಗಿದ್ದರು. ಆಗ ಮಾರುಕಟ್ಟೆ ಸ್ಥಿರತೆ ಕಾಯ್ದುಕೊಳ್ಳಲು ವಿಫಲವಾಗಿತ್ತು. ಇದೀಗ ಸಿನ್ಹಾ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸುತ್ತಿದ್ದಂತೆಯೇ ಮಾರುಕಟ್ಟೆ ಏರಿಕೆಯತ್ತ ಮುಖ ಮಾಡಿದೆ ಎಂದು ಹೇಳಿದರು.

ಈ ಹಿಂದೆ ವಿತ್ತ ಸಚಿವ ಚಿದಂಬರಂ ಅವರ ಕುರಿತು ಆರೋಪ ಮಾಡಿದ್ದ ಬಿಜೆಪಿ ಮುಖಂಡ ಯಶವಂತ್ ಸಿನ್ಹಾ ಅವರು, ವಿತ್ತ ಸಚಿವ ಪಿ.ಚಿದಂಬರಂ ಅವರಿಗೆ 18 ಪ್ರಶ್ನೆಗಳನ್ನು ಕೇಳಿದ್ದರು. ಅಲ್ಲದೆ ಚಿದಂಬರಂ ಅವರು ಯುಪಿಎ ಸರ್ಕಾರದ ದುರಂತ ನಾಯಕರಾಗಲಿದ್ದಾರೆ. ತಮ್ಮ ದುರಾಡಳಿತ ಮತ್ತು ಅಸಂಬಂದ್ಧ ಆರ್ಥಿಕ ನೀತಿಗಳಿಂದಾಗಿ ಯುಪಿಎ ಸರ್ಕಾರದ ಪತನಕ್ಕೆ ಚಿದಂಬರಂ ಅವರೇ ಕಾರಣ ಎಂದು ಅವರೇ ಶೀಘ್ರದಲ್ಲಿಯೇ ತಿಳಿಯಲಿದ್ದಾರೆ ಎಂದು ಸಿನ್ಹಾ ಲೇವಡಿ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement