ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೈ ವಿರುದ್ಧ ಭಿತ್ತಿಪತ್ರ ಹಂಚುತ್ತಿರುವ ಬಿಜೆಪಿ: ಪ್ರಿಯಾಂಕ

ರಾಹುಲ್ ರನ್ನು ಸೋಲಿಸಲು ಬಿಜೆಪಿ ವಾಮಮಾರ್ಗವನ್ನು ಅನುಸರಿಸು..

Srinivasa Murthy VN
Updated On : 2 May 2014, 4:14 am

ಅಮೇಠಿ: ತಮ್ಮ ಸಹೋದರ ರಾಹುಲ್ ಗಾಂಧಿ ಅವರನ್ನು ಸೋಲಿಸಲು ಬಿಜೆಪಿ ವಾಮಮಾರ್ಗವನ್ನು ಅನುಸರಿಸುತ್ತಿದ್ದು, ಅರ್ಧರಾತ್ರಿಯಲ್ಲಿ ಭಿತ್ತಿಪತ್ರಗಳನ್ನು ಹಂಚುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ತಮ್ಮ ಸಹೋದರ ರಾಹುಲ್ ಗಾಂಧಿ ಅವರ ಪರವಾಗಿ ಪ್ರಚಾರ ಮುಂದುವರೆಸಿರುವ ಪ್ರಿಯಾಂಕಾ ಗಾಂಧಿ ಅವರು, ಬಿಜೆಪಿ ಪಕ್ಷ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, 'ಎಲ್ಲರೂ ಮಲಗಿದ ವೇಳೆ ಬಿಜೆಪಿ ಕಾರ್ಯಕರ್ತರ ಅಮೇಠಿಯ ಮನೆಗಳ ಮುಂದೆ ಕಾಂಗ್ರೆಸ್ ವಿರುದ್ಧದ ಬರಹಗಳಿರುವ ಭಿತ್ತಿಪತ್ರಗಳನ್ನು ಹಂಚುವ ಮೂಲಕ ತಮ್ಮ ಹೇಡಿತನವನ್ನು ಪ್ರದರ್ಶಿಸುತ್ತಿದ್ದಾರೆ' ಎಂದು ಆರೋಪಿಸಿದರು.

'ಭಿತ್ತಿಪತ್ರಗಳನ್ನು ರಾತ್ರಿ ವೇಳೆ ಇಡುವ ಬದಲು ಹಗಲಿನಲ್ಲೇ ಇಡಿ. ಜನರಿಗೆ ನೀವೇನಾದರೂ ಹೇಳಬೇಕೆಂದೆನಿಸದರೆ ಧೈರ್ಯವಾಗಿ ಹೇಳಬಹುದು. ಆದರೆ ನಿಮಗೆ ಆ ಧೈರ್ಯವಿಲ್ಲ. ಹೀಗಾಗಿಯೇ ನೀವು ರಾತ್ರಿ ವೇಳೆ ಭಿತ್ತಿಪತ್ರಗಳನ್ನು ಹಂಚುತ್ತಿದ್ದೀರಿ. ಇದು ನಿಮ್ಮ ಹೇಡಿತನದ ಪ್ರದರ್ಶನವಾಗುತ್ತದೆ ಎಂದು ಪ್ರಿಯಾಂಕ ವಾಗ್ದಾಳಿ ನಡೆಸಿದರು.

'ಅಮೇಠಿಯ ಜನತೆಗೆ ಸತ್ಯ ಯಾವುದು ಸುಳ್ಳು ಯಾವುದು ಎಂದು ತಿಳಿದಿದ್ದು, ಅವರಂತೆ ನಾಟಕ ಮಾಡುವ ಅವಶ್ಯಕತೆ ನಮಗಿಲ್ಲ. ಬಿಜೆಪಿಯ ಈ ದುರದ್ದೇಶಪೂರಿತ ಪ್ರಚಾರಕ್ಕೆ ಹೆದರಿ ನಾವು ಹಿಂದೆ ಸರಿಯುವ ಮಾತೇ ಇಲ್ಲ. ಅಮೇಠಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಬೇಕಿದೆ. ಆದರೆ ಪ್ರಸ್ತುತ ಅನ್ಯ ಪಕ್ಷಗಳು ಪ್ರಕಟಿಸಿರುವ ಅಭ್ಯರ್ಥಿಗಳು ರಾಹುಲ್ ಗಾಂಧಿಯನ್ನು ಸೋಲಿಸಲು ಬಂದವರೇ ಹೊರತು, ನಿಮ್ಮ ಅಭಿವೃದ್ದಿಗೆ ಬಂದವರಲ್ಲ. ಗೆದ್ದರೂ ಅವರು ಶಾಶ್ವತವಾಗಿ ಇಲ್ಲಿರುವುದಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ ಎಂದು ಪ್ರಿಯಾಂಕಾ ಗಾಂಧಿ ಅವರು ಮನವಿ ಮಾಡಿದ್ದಾರೆ. ಆ ಮೂಲಕ ಬಿಜೆಪಿ ಅಭ್ಯರ್ಥಿ ಮತ್ತು ಕಿರುತೆರೆ ನಟಿ ಸ್ಮೃತಿ ಇರಾನಿ ಅವರಿಗೆ ಪರೋಕ್ಷವಾಗಿ ಚುಚ್ಚಿದ್ದಾರೆ.

ಕಳೆದ ಹಲವು ದಿನಗಳಿಂದ ಕಾಂಗ್ರೆಸ್ ಪಕ್ಷದ ವಿರುದ್ಧದ ಬರಹಗಳಿರುವ ಭಿತ್ತಿಪತ್ರಗಳು ರಾತ್ರೋರಾತ್ರಿ ಪತ್ತೆಯಾಗುತ್ತಿದ್ದು, ಈ ಬಗ್ಗೆ ಕಾಂಗ್ರೆಸ್ ಕಾರ್ಯಕತರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಜನತಾಪಕ್ಷದ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಆರೋಪಿಸಿರುವ ಹಲವು ಅಂಶಗಳು ಭಿತ್ತಿಪತ್ರದಲ್ಲಿದ್ದು, ಭಿತ್ತಿಪತ್ರ ಹಂಚಿಕೆ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement