ಅಸಭ್ಯ ವರ್ತನೆ: ಬಾಲಿವುಡ್ ನಟಿ ಪೂನಂ ಪಾಂಡೆ ಬಂಧನ
ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬಾಲಿವುಡ್ ನಟಿ ಪೂನಂ ಪಾಂಡೆಯನ್ನು ಬಂಧಿಸಲಾಗಿದೆ.
ಮುಂಬೈ: ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬಾಲಿವುಡ್ ನಟಿ ಪೂನಂ ಪಾಂಡೆಯನ್ನು ಬಂಧಿಸಲಾಗಿದೆ.
ನಿನ್ನೆ ತಡರಾತ್ರಿಯಲ್ಲಿ ಮುಂಬೈನ ಮೀರಾ ರಸ್ತೆಯಲ್ಲಿ ಪೂನಂ ಪಾಂಡೆಯನ್ನು ಬಂಧಿಸಲಾಗಿದ್ದು, ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 110 (ಸಾರ್ವಜನಿಕ ಅಸಭ್ಯ ವರ್ತನೆ) ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆ 117ರ ಆಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೀರಾ ರಸ್ತೆ ಸೂಬರ್ಬನ್ ಉದ್ಯಾನವನದ ಬಳಿ ಪೂನಂಪಾಂಡೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನಲೆಯಲ್ಲಿ ಸ್ಥಳೀಯ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಉದ್ಯಾನವನ ಬಳಿ ಜನರ ಗುಂಪು ಪೂನಂಪಾಂಡೆಯನ್ನು ಸುತ್ತುವರೆದಿದ್ದು, ಆಗ ಮದ್ಯ ಪ್ರವೇಶಿಸಿದ ಪೊಲೀಸರು ತಮ್ಮ ಕಾರಿನ ಬಳಿ ನಿಂತಿದ್ದ ಪೂನಂ ಪಾಂಡೆಯನ್ನು ಬಂಧಿಸಿ ಠಾಣೆಗೆ ಕರೆದೋಯ್ದಿದ್ದಾರೆ. ನಂತರ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಮನೆಗೆ ವಾಪಸ್ ಕಳುಹಿಸಿದ್ದಾರೆ.
2011ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ (ಕು)ಖ್ಯಾತಿ ಗಳಿಸಿದ್ದ ಪೂನಂ ಪಾಂಡೆ, ಇದೀಗ ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿ ಸ್ವತಃ ವಿವಾದಕ್ಕೀಡಾಗಿದ್ದಾರೆ.