ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಸ್ಸಾಂ ಹಿಂಸಾಚಾರ: ಉಗ್ರರಿಗೆ ಸಹಕರಿಸಿದ 22 ಮಂದಿಯ ಬಂಧನ

ಅಸ್ಸಾಂನಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಪ್ರಕರಣಕ್ಕೆ...

Srinivasa Murthy VN
Updated On : 4 May 2014, 2:57 am

ಕೊಕ್ರಾಝರ್: ಅಸ್ಸಾಂನಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕತವಾದಿಗಳಿಗೆ ಸಹಕರಿಸಿದ 22 ಮಂದಿಯನ್ನು ಬಂಧಿಸಲಾಗಿದೆ.

ನಿನ್ನೆ ಕೊಕ್ರಾಝರ್ ಜಿಲ್ಲೆಯ ಬಾಲಾಪಾರ ಗ್ರಾಮದಲ್ಲಿ ಸಂಭವಿಸಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು 22 ಮಂದಿಯನ್ನು ಬಂಧಿಸಿದ್ದಾರೆ. ಈ ಎಲ್ಲ ಆರೋಪಿಗಳು ನಿನ್ನೆ ದಾಳಿ ನಡೆಸಿದ ಉಗ್ರರಿಗೆ ಸಹಕರಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಪ್ರಸ್ತುತ ಬಂಧನಕ್ಕೀಡಾಗಿರುವ 22 ಮಂದಿ ಬಾಂಗ್ಲಾದೇಶದ ಮುಸ್ಲಿಂ ಪ್ರಜೆಗಳಾಗಿದ್ದು, ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿದ್ದರು ಎಂದು ತಿಳಿದು ಬಂದಿದೆ.

ನಿನ್ನೆ ಅಸ್ಸಾಂನ ಬೋಡೋಲ್ಯಾಂಡ್‌ನಲ್ಲಿ 20ರಿಂದ 25 ಶಸ್ತ್ರ ಸಜ್ಜಿತ ಉಗ್ರರು ಕೊಕ್ರಾಝರ್ ಜಿಲ್ಲೆಯ ಬಾಲಾಪಾರ ಗ್ರಾಮದ ಮನೆಗಳಿಗೆ ನುಗ್ಗಿ ಮನಸೋ ಇಚ್ಛೆ ಗುಂಡಿನ ಮಳೆಗರೆದಿದ್ದರು. ಘಟನೆಯಲ್ಲಿ ಮೂವರು ಮಕ್ಕಳು, ನಾಲ್ವರು ಮಹಿಳೆಯರು ಸೇರಿದಂತೆ 21 ಜನರು ಸಾವಿಗೀಡಾಗಿದ್ದರು. ಅಲ್ಲದೆ ಇಂದು ಬೆಳಗ್ಗೆ ಪೊಲೀಸರು ನಡೆಸಿದ ಶೋಧಕಾರ್ಯದ ವೇಳೆ ಮತ್ತೆ 9 ಮೃತದೇಹಗಳು ಪತ್ತೆಯಾಗಿದ್ದವು.

ಘಟನಾ ಸ್ಥಳಕ್ಕೆ ಸೇನಾ ತುಕಡಿಗಳು ಆಗಮಿಸಿದ್ದು, ಕೊಕ್ರಾಝರ್ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಹೊರಡಿಸಲಾಗಿದೆ. ಎನ್‌ಡಿಎಫ್‌ಬಿ ಉಗ್ರರು ನಡೆಸಿದ ಈ ಕುಕೃತ್ಯದ ವಿರುದ್ಧ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಅಲ್ಲದೆ ಎನ್‌ಡಿಎಫ್‌ಬಿ ಉಗ್ರರನ್ನು ಹತ್ತಿಕ್ಕುವಂತೆ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೇನಾಪಡೆಗಳಿಗೆ ಆದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement