ಕೆಎಸ್ಆರ್ಟಿಸಿ ಪ್ರಯಾಣ ದರ ಏರಿಕೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೆಎಸ್ಆರ್ಟಿಸಿ ಪ್ರಯಾಣದರವನ್ನು ಏರಿಕೆ ಮಾಡಿದ್ದು, ಮದ್ಯರಾತ್ರಿಯಿಂದಲೇ ನೂತನ ಪರಿಷ್ಕೃತ ದರ ಜಾರಿಗೆ ಬರಲಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೆಎಸ್ಆರ್ಟಿಸಿ ಪ್ರಯಾಣದರವನ್ನು ಏರಿಕೆ ಮಾಡಿದ್ದು, ಮದ್ಯರಾತ್ರಿಯಿಂದಲೇ ನೂತನ ಪರಿಷ್ಕೃತ ದರ ಜಾರಿಗೆ ಬರಲಿದೆ.
ಗ್ರಾಮಾಂತರ ಸಾರಿಗೆ ಪ್ರಯಾಣದಲ್ಲಿ ಶೇ.7.6 ರಷ್ಟು ಮತ್ತು ಇತರೆ ಸಾರಿಗೆ ಪ್ರಯಾಣದಲ್ಲಿ ಶೇ.8ರಷ್ಟು ಪ್ರಯಾಣ ದರ ಏರಿಕೆ ಮಾಡಲಾಗಿದೆ. ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆಗಳ ಪ್ರಯಾಣ ದರವನ್ನು ಕೂಡ ಏರಿಕೆ ಮಾಡಲಾಗಿದೆ. ಅಂತೆಯೇ ಸಾಮಾನ್ಯ ಸಾರಿಗೆ ಮತ್ತು ಎಕ್ಸ್ಪ್ರೆಸ್ ಸಾರಿಗೆ ದರ ಏರಿಕೆ ಮಾಡಲಾಗಿದೆ.
ಆದರೆ ದುಬಾರಿ ಪ್ರಯಾಣಗಳಾದ ವೋಲ್ವೋ, ಬೆಂನ್ಝ್ ಮತ್ತು ರಾಜಹಂಸಗಳ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯನ್ನು ಮುಂದುವರೆಸಲಾಗಿದೆ.