ಪಾಸ್ವಾನ್ ವೇಶ್ಯೆಗಿಂತಲೂ ಕಡೆ: ಪಪ್ಪು ಯಾದವ್ ವಿವಾದಾತ್ಮಕ ಹೇಳಿಕೆ
ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ರಾಮವಿಲಾಸ್ ಪಾಸ್ವಾನ್..
ಪಾಟ್ನಾ: ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ರಾಮವಿಲಾಸ್ ಪಾಸ್ವಾನ್ ಅವರು, ವೇಶ್ಯೆಗಿಂತಲೂ ಕಡೆ ಎಂದು ರಾಷ್ಟ್ರೀಯ ಜನತಾದಳ ನಾಯಕ ಪಪ್ಪು ಯಾದವ್ ಹೇಳಿದ್ದಾರೆ.
ಹಾಜಿಪುರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿರುವ ಪಪ್ಪು ಯಾದವ್ ಅವರು, ಎಲ್ಜೆಪಿ ಮುಖಂಡ ರಾಮವಿಲಾಸ್ ಪಾಸ್ವಾನ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿರುವ ರಾಮವಿಲಾಸ್ ಪಾಸ್ವಾನ್ ಅವರು ವೇಶ್ಯೆಗಿಂತಲೂ ಕಡೆ ಎಂದು ಪಪ್ಪುಯಾದವ್ ಅವರು ಹೇಳಿಕೆ ನೀಡಿದ್ದಾರೆ.
'ನನ್ನ ಪ್ರಕಾರ ಒಂದು ರೀತಿಯಲ್ಲಿ ವೇಶ್ಯೆಯೇ ಎಷ್ಟೋ ಪಾಲು ಮೇಲು. ಆದರೆ ಎಲ್ಜೆಪಿ ಮುಖಂಡ ಅವರಿಗಿಂತಲೂ ಕಡೆಯಾಗಿ ವರ್ತಿಸಿದ್ದಾರೆ. ಅಧಿಕಾರಕ್ಕಾಗಿ ಯಾವ ಹಂತಕ್ಕಾದರೂ ಪಾಸ್ವಾನ್ ಇಳಿಯುತ್ತಾರೆ' ಎನ್ನುವ ಅರ್ಥದಲ್ಲಿ ಪಪ್ಪುಯಾದವ್ ಅವರು ವಾಗ್ದಾಳಿ ನಡೆಸಿದ್ದಾರೆ.
ಪ್ರಸ್ತುತ ಆರ್ಜೆಡಿ ಪಕ್ಷ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದೊಂದಿಗೆ ಚುನಾವಣಾ ಕಣಕ್ಕಿಳಿದಿದ್ದು, ಪಪ್ಪು ಯಾದವ್ ಅವರು ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವರ ವಿರುದ್ಧವಾಗಿ ಮಾಧೋಪುರ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.