ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪೊಲೀಸರು ತಾಲಿಬಾನಿಗಳಿಗಿಂತಲೂ ಕಡೆ: ಪೂನಂ ಪಾಂಡೆ

ಪೊಲೀಸರು ತಾಲಿಬಾನಿಗಳಿಂಗತಲೂ ಕೆಟ್ಟವರು ಎಂದು ಬಾಲಿವುಡ್ ನಟಿ ಪೂನಂ ಪಾಂಡೆ ಮಂಗಳವಾರ ಹೇಳಿದ್ದಾರೆ.

Srinivasa Murthy VN
Updated On : 6 May 2014, 4:52 am

ಮುಂಬೈ: ಪೊಲೀಸರು ತಾಲಿಬಾನಿಗಳಿಂಗತಲೂ ಕೆಟ್ಟವರು ಎಂದು ಬಾಲಿವುಡ್ ನಟಿ ಪೂನಂ ಪಾಂಡೆ ಮಂಗಳವಾರ ಹೇಳಿದ್ದಾರೆ.

ಕಳೆದ ಶನಿವಾರ ಮುಂಬೈನ ಮೀರಾ ರಸ್ತೆಯಲ್ಲಿ ಪೂನಂ ಪಾಂಡೆಯನ್ನು ಬಂಧಿಸಲಾಗಿತ್ತು. ಅಲ್ಲದೆ ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 110 (ಸಾರ್ವಜನಿಕ ಅಸಭ್ಯ ವರ್ತನೆ) ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆ 117ರ ಆಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪೊಲೀಸ್ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನಟಿ ಪೂನಂ ಪಾಂಡೆ, 'ಮುಂಬೈ ಪೊಲೀಸರು ತಾಲಿಬಾನಿಗಳಿಗಿಂತಲೂ ಕಡೆ. ಆಗ ಸಮಯ ಇನ್ನೂ ಕೇವಲ ರಾತ್ರಿ 10.30 ಆಗಿತ್ತು. ನಾನು ನನ್ನ ಸ್ವಂತ ಸಹೋದರ ಆದಿತ್ಯ ಪಾಂಡೆಯೊಂದಿಗೆ ಕಾರಿನಲ್ಲಿದ್ದೆ. ನಾನೇನು ಕುಡಿದಿರಲಿಲ್ಲ ಅಥವಾ ಅಸಭ್ಯವಾಗಿ ವರ್ತಿಸುತ್ತಿರಲಿಲ್ಲ. ಆದರೂ ನನ್ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು'.

'ನನ್ನ ಬಳಿ ಬಂದ ಪೊಲೀಸರು ನಾನು ಯಾರೆಂದು ತಿಳಿಯುವವರೆಗೂ ಸಾಮಾನ್ಯವಾಗಿಯೇ ವರ್ತಿಸುತ್ತಿದ್ದರು. ಆದರೆ ನಾನೇ ಪೂನಂ ಪಾಂಡೆ ಎಂದು ತಿಳಿದ ಬಳಿಕ ಆಕ್ರೋಶ ಭರಿತರಾಗಿ ಮಾತನಾಡಿದರು. ಕಾರಿನಲ್ಲಿ ಆ ಯುವಕನೊಂದಿಗೆ ನಾನೇನು ಮಾಡುತ್ತಿದ್ದೇನೆ ಎಂದು ಕೇಳಿದರು. ಆತ ನನ್ನ ಸ್ವಂತ ಸಹೋದರ ಎಂದು ಹೇಳಿದರೂ ಕೇಳದ ಪೊಲೀಸರು ನನ್ನನ್ನು ಠಾಣೆಗೆ ಕರೆದೊಯ್ದರು. ಮಾಧ್ಯಮಗಳಲ್ಲಿ ಈ ವಿಚಾರ ಪ್ರಸಾರವಾಗುತ್ತಿದ್ದಂತೆಯೇ ನನ್ನ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ಘಟನೆಗೆಲ್ಲ ನಾನೇ ಕಾರಣ ಎಂದು ನನ್ನನ್ನು ಗುರಿ ಮಾಡಲಾಗುತ್ತಿದೆ'.

'ಪೊಲೀಸರು ತಮ್ಮ ಪ್ರಚಾರಕ್ಕಾಗಿ ನನ್ನನ್ನು ಬಳಸಿಕೊಂಡಿದ್ದಾರೆ. ಅವರ 8 ನಿಮಿಷಗಳ ಪ್ರಚಾರಕ್ಕಾಗಿ ನನ್ನ ತೇಜೋವಧೆಯಾಗಿದೆ. ಮಾಧ್ಯಮಗಳಲ್ಲಿ ನಾನು ಅಸಭ್ಯವಾದ ಉಡುಗೆಯನ್ನುಟ್ಟಿದೆ ಎಂದು ಹೇಳಿದ್ದಾರೆ. ಆದರೆ ನಾನು ಅಂದು ಸಾಮಾನ್ಯ ಹುಡುಗಿಯರು ಹಾಕುವ ರೀತಿಯ ಬಟ್ಟೆಯನ್ನೇ ತೊಟ್ಟಿದ್ದೆ. ಆದರೂ ನಾನು ಪೊಲೀಸರಿಂದ ವಿಚಾರಣೆಗೊಳಗಾಗಬೇಕಾಯಿತು. ಇಂದು ನನಗಾದದ್ದು, ನಾಳೆ ಯಾವುದೇ ಹುಡುಗಿಗಾದರೂ ಆಗಬಹುದು. ಮೊಟ್ಟ ಮೊದಲ ಬಾರಿಗೆ ಮುಂಬೈನಲ್ಲಿ ತಾಲಿಬಾನಿ ವ್ಯವಸ್ಥೆಯನ್ನು ನೋಡುತ್ತಿದ್ದೇನೆ. ಸ್ಥಳೀಯ ಆಡಳಿತ ತಾಲಿಬಾನಿಗಳಿಗಿಂತಲೂ ಏನು ಕಡಿಮೆ ಇಲ್ಲ ಎಂದು ಪೂನಂ ಪಾಂಡೆ ಹೇಳಿದರು.

ಕಳೆದ ಶನಿವಾರ ಮುಂಬೈನ ಮೀರಾ ರಸ್ತೆ ಸೂಬರ್‌ಬನ್ ಉದ್ಯಾನವನದ ಬಳಿ ಪೂನಂಪಾಂಡೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನಲೆಯಲ್ಲಿ ಸ್ಥಳೀಯ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದರು. ಉದ್ಯಾನವನ ಬಳಿ ಜನರ ಗುಂಪು ಪೂನಂಪಾಂಡೆಯನ್ನು ಸುತ್ತುವರೆದಿತ್ತು. ಆಗ ಮದ್ಯಪ್ರವೇಶಿಸಿದ ಪೊಲೀಸರು ತಮ್ಮ ಕಾರಿನ ಬಳಿ ನಿಂತಿದ್ದ ಪೂನಂ ಪಾಂಡೆಯನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಮನೆಗೆ ವಾಪಸ್ ಕಳುಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement