ಬೀದಿ ದೀಪಗಳಿಗಿಲ್ಲ ಲೋಡ್ ಶೆಡ್ಡಿಂಗ್ ಎಫೆಕ್ಟ್
ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದ್ದರೂ ಬೆಂಗಳೂರಿನ ಬೀದಿ ದೀಪಗಳಿಗೆ...
ಬೆಂಗಳೂರು: ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದ್ದರೂ ಬೆಂಗಳೂರಿನ ಬೀದಿ ದೀಪಗಳಿಗೆ ಮಾತ್ರ ವಿದ್ಯುತ್ ಕೊರತೆಯೇ ಇಲ್ಲ.
ಇತ್ತೀಚೆಗಷ್ಟೇ ಮಾನ್ಯ ಇಂಧನ ಸಚಿವರು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದ್ದು, ವಿದ್ಯುತ್ ಕೊರತೆ ಇರುವುದರಿಂದ ಲೋಡ್ ಶೆಡ್ಡಿಂಗ್ ಅನಿವಾಯ೯ ಎಂದು ಹೇಳಿದ್ದರು. ಆದರೆ ಸಚಿವರ ಹೇಳಿಕೆ ಬೆಂಗಳೂರಿನ ಬೀದಿ ದೀಪಗಳಿಗೆ ಅನ್ವಯಿಸುತ್ತದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಏಕೆಂದರೆ ರಾತ್ರಿ ಹೊತ್ತು ಮಾತ್ರ ಉರಿಯಬೇಕಿದ್ದ ಬೀದಿ ದೀಪಗಳು ಬೆಳಗ್ಗೆ 11 ಆದರೂ ಸ್ಥಗಿತಗೊಂಡಿಲ್ಲ.
ಬೆಂಗಳೂರಿನ ಹೖದಯ ಭಾಗವಾದ ಸಿರಸಿ ರಸ್ತೆ ಮೇಲ್ಸೇತುವೆಯ ಬಳಿ 11 ಗಂಟೆಯಾದರೂ ಯಾವುದೇ ಬೀದಿ ದೀಪಗಳು ಸ್ಥಗಿತಗೊಂಡಿಲ್ಲ. ತಾಂತ್ರಿಕ ಸಮಸ್ಯೆಯೋ? ಅಥವಾ ಬೆಸ್ಕಾಂ ಸಿಬ್ಬಂದಿಗಳ ನಿಲ೯ಕ್ಷ್ಯವೋ ? ಅಲ್ಲಿ ಪೋಲಾಗುತ್ತಿರುವುದು ಮಾತ್ರ ಸಾವ೯ಜನಿಕರ ಹಣ. ವಿದ್ಯುತ್ ಕೊರತೆ ಎದುರಾದರೆ ಸಾವ೯ಜನಿಕರ ಮೇಲೆ ಲೋಡ್ ಶೆಡ್ಡಿಂಗ್ ಹೇರುವ ಸಕಾ೯ರ ಇಂತಹ ಸಮಸ್ಯೆಗಳ ಮೇಲೆ ನಿಲ೯ಕ್ಷ್ಯವಹಿಸುತ್ತಿದೆ.
ಮಾನ್ಯ ಇಂಧನ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಈಗಲಾದರೂ ಎಚ್ಚೆತ್ತು ಇಂತಹ ಸಮಸ್ಯೆಗಳ ನಿವಾರಿಸುವ ಮೂಲಕ ಸಾವ೯ಜನಿಕ ಹಣ ಮತ್ತು ಇಂಧನವನ್ನು ಉಳಿಸಬೇಕಿದೆ.