ಪಾಕಿಸ್ತಾನದಿಂದ ಮತ್ತೆ ಕದನವಿರಾಮ ಉಲ್ಲಂಘನೆ
ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನ ಯೋಧರು ಮತ್ತೆ ಕದನವಿರಾಮವನ್ನು ಉಲ್ಲಂಘಿಸಿದ್ದು, ಭಾರತ ಯೋಧರತ್ತ ಗುಂಡಿನ ದಾಳಿ ನಡೆಸಿದ್ದಾರೆ.
ನವದೆಹಲಿ: ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನ ಯೋಧರು ಮತ್ತೆ ಕದನವಿರಾಮವನ್ನು ಉಲ್ಲಂಘಿಸಿದ್ದು, ಭಾರತ ಯೋಧರತ್ತ ಗುಂಡಿನ ದಾಳಿ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಕೃಷ್ಣ ಘಾಟಿ ಪ್ರದೇಶದಲ್ಲಿ ಪಾಕಿಸ್ತಾನ ಯೋಧರು ಭಾರತ ಯೋಧರತ್ತ ಗುಂಡಿನ ಸುರಿಮಳೆಗರೆದಿದ್ದಾರೆ. ಕೇವಲ 15 ದಿನಗಳಲ್ಲಿ ಪಾಕಿಸ್ತಾನ ಯೋಧರು 5 ಭಾರಿ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪೂಂಚ್ ಜಿಲ್ಲೆಯ ನಂಗಿ ಟೆಕ್ರಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಭಾರತೀಯ ಯೋಧರನ್ನು ಗುರಿಮಾಡಿಕೊಂಡು ಪಾಕಿಸ್ತಾನ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಉಭಯ ದೇಶಗಳ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಸಾವುನೋವುಗಳಾದ ಕುರಿತು ಯಾವುದೇ ವರದಿಯಾಗಿಲ್ಲ. ಇದೇ ಮೇ 5ರಂದು ಇದೇ ಗ್ರಾಮದಲ್ಲಿ ಪಾಕಿಸ್ತಾನ ಯೋಧರು ಅತ್ಯಾಧುನಿಕ ಮಿಷನ್ ಗನ್ ಬಳಸಿ ಭಾರತೀಯ ಯೋಧರತ್ತ ಗುಂಡಿನ ದಾಳಿ ನಡೆಸಿದ್ದರು.