ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಇಸ್ರೇಲ್ ಮಾಜಿ ಪ್ರಧಾನಿಗೆ 6 ವರ್ಷ ಜೈಲು

ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಮಾಜಿ ಪ್ರಧಾನಿ ಎಹುದ್ ಒಲ್ಮಾರ್ಟ್ ನ್ಯಾಯಾಲಯ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Srinivasa Murthy VN
Updated On : 13 May 2014, 4:56 am

ಜೆರುಸಲೇಂ: ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಮಾಜಿ ಪ್ರಧಾನಿ ಎಹುದ್ ಒಲ್ಮಾರ್ಟ್ ನ್ಯಾಯಾಲಯ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಇಸ್ರೇಲ್ ರಾಜಧಾನಿ ಜೆರುಸಲೇಂ ನಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದ ಮೇಯರ್ ಅವರಿಗೆ ಬೆಂಬಲ ನೀಡಿದ ಎಹುದ್ ಒಲ್ಮಾರ್ಟ್ ಅವರು ಲಂಚಪಡೆದಿದ್ದರು ಎಂಬ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಅವರಿಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

ಇದೇ ಪ್ರಕರಣಕ್ಕೆ ಕಳೆದ ಮಾರ್ಚ್ ತಿಂಗಳಲ್ಲಿ ಇಸ್ರೇಲ್ ನ್ಯಾಯಾಲಯ ಎಹುದ್ ಒಲ್ಮಾರ್ಟ್ ಅವರಿಗೆ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ನ್ಯಾಯಾಲಯದ ಅದೇಶದ ವಿರು0ದ್ಧ ಎಹುದ್ ಒಲ್ಮಾರ್ಟ್ ಪರ ವಕೀಲ ಮೇಲ್ಮನವಿ ಸಲ್ಲಿಸಿದ್ದರು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕೆಳಮನೆ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. ಅಲ್ಲದೆ ಎಹುದ್ ಒಲ್ಮಾರ್ಟ್ ಅವರಿಗೆ 6 ವರ್ಷಗಳ ಕಾಲ ಸೆರೆವಾಸ ಶಿಕ್ಷೆ ವಿಧಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement