ಪ್ರಧಾನಿಯಾಗಿ ಮೋದಿ: ದೇಶ ತೊರೆದ ಕಮಾಲ್ ಖಾನ್
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದರೆ ಲಿಂಗ..
ಮುಂಬೈ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದರೆ ಲಿಂಗ ಬದಲಾವಣೆ ಮಾಡಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದ ನಟ ಕಮಾಲ್ ಖಾನ್ ದೇಶ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಕು'ಖ್ಯಾತಿ' ಪಡೆಯುತ್ತಿದ್ದ ಬಾಲಿವುಡ್ ನಟ ಮತ್ತು ಬಿಗ್ಬಾಸ್ ಖ್ಯಾತಿಯ ಕಮಾಲ್ ರಷೀದ್ ಖಾನ್ ದೇಶತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪೂರಕವೆಂಬಂತೆ ಅವರು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರೊಂದಿಗೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಚಿತ್ರಗಳು ಮಾಧ್ಯಮಗಳಿಗೆ ದೊರೆತಿವೆ.
ಈ ಹಿಂದೆ 2012ರ ಡಿಸೆಂಬರ್ನಲ್ಲಿ ಟ್ವೀಟ್ ಮಾಡಿದ್ದ ನಟ ಕಮಾಲ್ ರಷೀದ್ ಖಾನ್, ನಾನು ಚಾಲೆಂಜ್ ಮಾಡುತ್ತೇನೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದರೆ ನಾನು ನನ್ನ ಲಿಂಗ ಬದಲಾವಣೆ ಮಾಡಿಕೊಂಡು ನಿರ್ದೇಶಕ ಕರಣ್ ಜೋಹಾರ್ ಅವರನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು.
ಮೂಲಗಳ ಪ್ರಕಾರ ಮುಂದಿನ ಹತ್ತು ವರ್ಷಗಳ ಕಾಲ ನಟ ಕಮಾಲ್ ಖಾನ್ ಅವರು ಭಾರತಕ್ಕೆ ಮರಳವುದಿಲ್ಲ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳ ವರದಿ ಮಾಡಿವೆ.
ಒಟ್ಟಾರೆ ಈ ಹಿಂದೆ ಬಿಗ್ಬಾಸ್ (ಸೀಸನ್-3) ಎಂಬ ವಿವಾದಗಳ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಕಮಾಲ್ ರಷೀದ್ ಖಾನ್, ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ದೇಶತೊರೆಯುವುದಾಗಿ ಹೇಳಿದ್ದವರ ಪೈಕಿ ಮೊದಲಿಗರಾಗಿ ದೇಶ ತೊರೆದಿದ್ದಾರೆ..!