ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾಪಿ ಕ್ಯಾಟ್ ಐಶ್ವರ್ಯ ರೈ..!

ಕ್ಯಾನೆ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡಿರುವ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಇದೀಗ ವಿವಾದವೊಂದಕ್ಕೆ..

Srinivasa Murthy VN
Updated On : 22 May 2014, 5:36 am

ನವದೆಹಲಿ: ಕ್ಯಾನೆ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡಿರುವ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಇದೀಗ ವಿವಾದವೊಂದಕ್ಕೆ ಕಾರಣವಾಗಿದ್ದಾರೆ.

ಫ್ರಾನ್ಸ್‌ನ ಕ್ಯಾನೆಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿರುವ ಬಾಲಿವುಡ್ ನಟಿ ಐಶ್ವರ್ಯ ರೈ ಅವರು ಎಲ್ಲರ ಕೇಂದ್ರ ಬಿಂದುವಾಗಿದ್ದು, ಇದೀಗ ಅವರು ತೊಟ್ಟಿರುವ ಉಡುಪು ವಿವಾದಕ್ಕೆ ಕಾರಣವಾಗಿದೆ. ಕ್ಯಾನೆ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ನಟಿ ಐಶ್ವರ್ಯ ರೈ ಬಂಗಾರದ ಬಣ್ಣದ ಗಾಗ್ರಾವನ್ನು ಧರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ ಐಶ್ ತೊಟ್ಟಿದ್ದ ಗಾಗ್ರಾ ವಿನ್ಯಾಸ ನಕಲಾಗಿದ್ದು, ಈ ಹಿಂದೆಯೇ ಮತ್ತೋರ್ವ ನಟಿಮಣಿ ಈ ವಿನ್ಯಾಸದ ಉಡುಪನ್ನು ಧರಿಸಿದ್ದರು.

ಬ್ರಾಡ್‌ವೇ ಸ್ಟಾರ್ ಕ್ರಿಸ್ಟಿನ್ ಚಿನೋವೆತ್ ಎಂಬ ನಟಿ ಈ ಧಿರಿಸನ್ನು ಇದೇ ವರ್ಷ ನಡೆದ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಧರಿಸಿದ್ದರು. ಆದರೆ ಇದೀಗ ಇದೇ ವಿನ್ಯಾಸದ ಉಡುಗೆಯನ್ನು ಧರಿಸುವ ಮೂಲಕ ಐಶ್ವರ್ಯ ರೈ ಬಚ್ಚನ್ ಮತ್ತೆ ಸುದ್ದಿಯಲ್ಲಿದ್ದಾರೆ.

ಒಟ್ಟಾರೆ ಐಶ್ ತೊಟ್ಟಿದ್ದ ಧಿರಿಸಿನ ಕುರಿತು ವಿವಾದಗಳೇನೆ ಇರಲಿ ಕ್ಯಾನೆ ಚಿತ್ರೋತ್ಸವದಲ್ಲಿ ಐಶ್ವರ್ಯ ರೈ, ತಮ್ಮ ಪತಿ ಅಭಿಷೇಕ್ ಬಚ್ಚನ್ ಸೇರಿದಂತೆ ಎಲ್ಲರ ಗಮನ ಸೆಳೆದಿದ್ದಂತೂ ನಿಜ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement