ಚಿತ್ರ ನಿರ್ಮಾಣಕ್ಕೆ ಮುಂದಾದ ದೇವಿಶ್ರೀ
ರಾಸಲೀಲೆ ಪ್ರಕರಣದಿಂದ ಕು'ಖ್ಯಾತಿ' ಪಡೆದಿದ್ದ ದೇವಿಶ್ರೀ ಸ್ವಾಮಿ ಇದೀಗ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಶೀಘ್ರದಲ್ಲಿಯೇ ಚಿತ್ರವೊಂದನ್ನು ನಿರ್ಮಿಸುತ್ತಾರಂತೆ.
ಬೆಂಗಳೂರು: ರಾಸಲೀಲೆ ಪ್ರಕರಣದಿಂದ ಕು'ಖ್ಯಾತಿ' ಪಡೆದಿದ್ದ ದೇವಿಶ್ರೀ ಸ್ವಾಮಿ ಇದೀಗ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಶೀಘ್ರದಲ್ಲಿಯೇ ಚಿತ್ರವೊಂದನ್ನು ನಿರ್ಮಿಸುತ್ತಾರಂತೆ.
ಈಗಾಗಲೇ ದೇವಿಶ್ರೀ ಅವರು ಚಿತ್ರ ನಿರ್ಮಾಣ ಸಂಸ್ಥೆಯ ಹೆಸರನ್ನು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದು, ದೇವಿಶ್ರೀ ಪ್ರೋಡಕ್ಷನ್ ಹೌಸ್ ಹೆಸರಿನ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ದೇವಿಶ್ರೀ ಅವರು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದು, ಚಿತ್ರಕಥೆ ಈಗಾಗಲೇ ಸಿದ್ಧವಾಗಿದೆ. ತಾವು ಕೇವಲ ಆಧ್ಯಾತ್ಮಿಕ ಚಿತ್ರಗಳಿಗಷ್ಟೇ ಪ್ರಾಮುಖ್ಯತೆ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ತಾವು ಕಿರುತೆರೆಯನ್ನು ಕೂಡ ಪ್ರವೇಶಿಸುತ್ತಿದ್ದು, ಶೀಘ್ರದಲ್ಲಿಯೇ ವೆಂಕಟೇಶ್ವರ ವೈಭವ ಎಂಬ ಧಾರಾವಾಹಿಯನ್ನು ನಿರ್ಮಿಸುವುದಾಗಿ ದೇವಿಶ್ರೀ ಹೇಳಿದ್ದಾರೆ.
ಒಟ್ಟಾರೆ ಕಿರುತೆರೆಯಲ್ಲಿ ಜ್ಯೋತಿಷ್ಯ ಹೇಳುತ್ತ ಅಲ್ಪ ಖ್ಯಾತಿ ಗಳಿಸಿದ್ದ ದೇವಿಶ್ರೀ ಸ್ವಾಮಿ, ರಾಸಲೀಲೆ ಪ್ರಕರಣದ ನಂತರ ರಾತ್ರೋ ರಾತ್ರಿ ಕು'ಖ್ಯಾತಿ'ಗಳಿಸಿದ್ದರು. ಇದೀಗ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಎರಡನೇ ಬಾರಿಗೆ ಬೇರೆಯ ದಾರಿಯಲ್ಲಿ ಕಿರುತೆರೆ ಪ್ರವೇಶಕ್ಕೆ ದೇವಿಶ್ರೀ ಮುಂದಾಗಿದ್ದಾರೆ.