ಜೀವನಶೈಲಿ

ಪೋಕೆಮಾನ್ ಗೊ ಗೇಮ್ ಆಡುವುದರಿಂದ 41 ದಿನ ಆಯುಷ್ಯ ಹೆಚ್ಚಳ: ಅಧ್ಯಯನ ವರದಿ

Srinivas Rao BV

ನವದೆಹಲಿ: ಬಿಡುಗಡೆಯಾದ ಪ್ರಾರಂಭದದಿಂದಲೂ ವೈರಲ್ ಆಗಿದ್ದ ಪೋಕ್ಮನ್ ಗೋ ಗೇಮ್, ಜನಪ್ರಿಯತೆ ಗಳಿಸಿದಷ್ಟೇ ವಿವಾದಕ್ಕೂ ಒಳಗಾಗಿತ್ತು.
ಈಗ ಪೋಕ್ಮನ್ ಗೋ ಗೇಂ ಬಗ್ಗೆ ಮತ್ತೊಂದು ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದ್ದು, ಪೋಕ್ಮನ್ ಗೋ ಗೇಮ್ ಆಡುವುದರಿಂದ 41 ದಿನಗಳು ಆಯುಷ್ಯ ಹೆಚ್ಚುತ್ತದೆ ಎಂದು ಅಧ್ಯಯನ ವರದಿಯೊಂದರ ಮೂಲಕ ತಿಳಿದುಬಂದಿದೆ.
ಪೋಕ್ಮನ್ ಗೋ ಗೇಮ್ ನ್ನು ವಿಶ್ವದಾದ್ಯಂತ ಈವರೆಗೆ 500 ಮಿಲಿಯನ್ ಬಾರಿ ಡೌನ್ ಲೋಡ್ ಮಾಡಲಾಗಿದೆ.
ಹಲವು ಬಾರಿ ಪೋಕ್ಮನ್ ಗೋ ಗೇಮ್ ನಿಂದ ಜೀವಕ್ಕೆ ಅಪಾಯ ಎದುರಾಗುವಂತಹ ಘಟನೆಗಳ ಉದಾಹರಣೆಗಳಿದ್ದರೂ, ಪೋಕ್ಮನ್ ಗೋ ಗೇಮ್ ನಿಂದ  41 ದಿನ ಆಯುಷ್ಯ ಹೆಚ್ಚಳವಾಗುತ್ತೆ ಎಂದು ಅಮೇರಿಕಾದ ಸ್ಟ್ಯಾಂಡ್ಫೊರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನ ವರದಿ ತಿಳಿಸಿದೆ. ಪೋಕ್ಮನ್ ಗೋ ಗೇಮ್ ಆಡುವವರು 1,473 ಹೆಜ್ಜೆಗಳನ್ನು ಹೆಚ್ಚುವರಿಯಾಗಿ ನಡೆದಿದ್ದು, ಇದು ಸಾಮಾನ್ಯವಾದ ದೈನಂದಿನ ಚಟುವಟಿಕೆಗಿಂತ ಶೇ.25 ರಷ್ಟು ಚಟುವಟಿಕೆ ನಡೆದಂತಾಗುತ್ತದೆ. ಇದರಿಂದ ದೈಹಿಕ ವ್ಯಾಯಾಮವಾಗಲಿದ್ದು, ಆಯುಷ್ಯವನ್ನು ಹೆಚ್ಚುಮಾಡಲು ಅನುಕೂಲವಾಗಲಿದೆ ಎಂದು ವಿಶ್ವವಿದ್ಯಾನಿಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 

SCROLL FOR NEXT