ಜೀವನಶೈಲಿ

ಕಣ್ಣಿನ ಆರೋಗ್ಯಕ್ಕೆ ಸೂತ್ರಗಳು

Sumana Upadhyaya
ನಿಮ್ಮ ಶಾರೀರಿಕ ಆರೋಗ್ಯದ,  ದೇಹದ ಫಿಟ್ ನೆಸ್ ಜೊತೆಗೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ಮುಖ್ಯ.  ಕಣ್ಣಿನ ಉತ್ತಮ ಆರೋಗ್ಯ ಮತ್ತು ಕಾರ್ಯನಿರ್ವಹಣೆಗೆ ಹಲವು ಪರಿಸರ ಮತ್ತು ವೈಯಕ್ತಿಕ ಕಾರಣಗಳು ಪ್ರಮುಖ ಪಾತ್ರ ವಹಿಸುತ್ತವೆ.
ನಿಮ್ಮ ಜೀವನಶೈಲಿಯಲ್ಲಿ ಕೆಲವು ಸಣ್ಣ ಮಾರ್ಪಾಡುಗಳನ್ನು ಮಾಡಿಕೊಂಡರೆ ಕಣ್ಣಿನ ಆರೋಗ್ಯ ಮತ್ತು ಉತ್ತಮ ಜೀವನಶೈಲಿಯನ್ನು ನಡೆಸಲು ಸಾಧ್ಯ.
ಸ್ವಚ್ಛತೆ ಕಾಪಾಡಿಕೊಳ್ಳಿ: ನಿಮ್ಮ ದಿನನಿತ್ಯ ಜೀವನದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ. ನಿಮ್ಮ ಕಣ್ಣ ರೆಪ್ಪೆಗೆ ಬಿಸಿ ನೀರನ್ನು ಮೃದುವಾಗಿ ಹಚ್ಚಿಕೊಳ್ಳಿ. ಕಣ್ಣು ರೆಪ್ಪೆಯನ್ನು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಕಣ್ಣ ರೆಪ್ಪೆಯಲ್ಲಿನ ಸಣ್ಣ ಗ್ರಂಥಿಗಳು ಆರೋಗ್ಯವಾಗಿ ಉಳಿಯುತ್ತದೆ.
ಕೆಟ್ಟ ಅಭ್ಯಾಸಗಳಿಂದ ದೂರವಿರಿ: ಧೂಮಪಾನ, ಮದ್ಯಪಾನಗಳು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಕೆಲವರ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಅವುಗಳಿಂದ ದೂರವಿದ್ದರೆ ಉತ್ತಮ.
ಆಹಾರ ಪದ್ಧತಿ ಸರಿಯಾಗಿರಲಿ: ಆರೋಗ್ಯಯುತ ಕಣ್ಣುಗಳಿಗೆ ಆರೋಗ್ಯಯುತ ಆಹಾರ ಪದ್ಧತಿ ರೂಢಿಸಿಕೊಳ್ಳಿ. ಕ್ಯಾರೆಟ್, ಹಸಿರು ತರಕಾರಿಗಳು, ಒಣ ಹಣ್ಣುಗಳು, ಮೀನು ಮೊದಲಾದ ಆಹಾರ ಪದಾರ್ಥಗಳು ನಮ್ಮದಾಗಿದ್ದರೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
ಕಾಸ್ಮೆಟಿಕ್ ಉತ್ಪನ್ನಗಳು: ಕಣ್ಣಿನ ಸುತ್ತ ಕಾಸ್ಮೆಟಿಕ್ ಉತ್ಪನ್ನಗಳನ್ನು ಬಳಸುವಾಗ ಎಚ್ಚರಿಕೆಯಿಂದಿರಿ. ಕಾಡಿಗೆ, ಐ ಲೈನರ್, ಮಸ್ಕರಾಗಳನ್ನು ಸರಿಯಾದ ವಿಧಾನದಲ್ಲಿ ಹಚ್ಚಿಕೊಳ್ಳಬೇಕು. ರಾತ್ರಿ ಮಲಗುವ ಮುನ್ನ ಕಣ್ಣಿನ ಮೇಕಪ್  ಗಳನ್ನು ತೊಳೆದು ಮಲಗಬೇಕು. ಹಾಗೆಯೇ ಬಿಡಬಾರದು. 
ವೈದ್ಯರನ್ನು ಸಂಪರ್ಕಿಸಿ: ಕಣ್ಣು ಕೆಂಪಾಗುವುದು, ನೋವಾಗುವುದು, ನೀರು ಬರುವುದು, ಕಣ್ಣು ಆಯಾಸವಾಗುವುದು ಇತ್ಯಾದಿ ಸಮಸ್ಯೆಗಳು ಉಂಟಾಗುತ್ತಿದ್ದರೆ ತಕ್ಷಣವೇ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ. ನಿಮ್ಮಷ್ಟಕ್ಕೇ ನೀವು ಮನೆಯಲ್ಲಿ ಔಷಧಿ ಮಾಡಿಕೊಳ್ಳುವ ಬದಲು ಸರಿಯಾದ ಸಮಯಕ್ಕೆ ಔಷಧ ತೆಗೆದುಕೊಳ್ಳುವುದು ಉತ್ತಮ.
SCROLL FOR NEXT