ಜೀವನಶೈಲಿ

ಪೋರ್ನ್ ಅಡಿಕ್ಟ್ ಆಗಿದ್ದರೆ ಸಂಬಂಧಗಳನ್ನು ನಿರ್ವಹಿಸುವುದು ಕಷ್ಟ!

Srinivas Rao BV
ಪೋರ್ನ್ ಅಡಿಕ್ಟ್ ಆಗಿದ್ದರೆ ಸಂಬಂಧಗಳನ್ನು ನಿರ್ವಹಿಸುವುದು ಕಷ್ಟ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. 
ಸಂಶೋಧಕರ ಪ್ರಕಾರ ಪೋರ್ನ್ ಗೆ ಅಡಿಕ್ಟ್ ಆದರೆ ಅಂತಹ ವ್ಯಕ್ತಿಗಳು ಮಧುರ ಸಂಬಂಧಗಳನ್ನು ಮುಂದುವರೆಸುವುದಕ್ಕೆ ತಾವು ಯೋಗ್ಯರಲ್ಲ ಅಥವಾ ತಮ್ಮನ್ನು ಪ್ರಣಯಭರಿತ ಸಂಗಾತಿಯಲ್ಲ ಎಂಬ ಭಾವನೆಗೆ ಸಿಲುಕುತ್ತಾರೆ. ಅಂತಿಮವಾಗಿ ಇದರಿಂದ ರೊಮ್ಯಾಂಟಿಕ್ ಸಂಬಂಧಗಳನ್ನು ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗಲಿದೆಯಂತೆ. 
ಉತಾಹ್ ನ ಬ್ರಿಗ್ಯಾಮ್ನ ಯುವ ವಿಶ್ವವಿದ್ಯಾಲಯದ ಸಂಶೋಧಕರು ಪೋರ್ನ್ ಅಡಿಕ್ಷನ್ ಬಗ್ಗೆ ಮಾತನಾಡಿದ್ದು, ಪೋರ್ನ್ ಗೆ ಅಡಿಕ್ಟ್ ಆದ ವ್ಯಕ್ತಿಯಲ್ಲಿ ತಾನು ಡೇಟಿಂಗ್ ಮಾರ್ಕೆಟ್ ನಲ್ಲಿರುವ ಹಾಳಾದ ಸರಕು ಎಂಬ ಭಾವನೆ ಮೂಡುತ್ತದೆ. ವ್ಯಂಗ್ಯವೆಂದರೆ ಪೋರ್ನ್ ಗೆ ಅಡಿಕ್ಟ್ ಆಗಿರುವವರು ಅದನ್ನು ನಿಯಂತ್ರಿಸಲು ಹೋದರೆ, ಏಕಾಂಗಿ ಭಾವನೆ ಹಾಗೂ ಗೌಪ್ಯತೆ ಅನಿಯಂತ್ರಿತ ಬಳಕೆಯನ್ನು ನಿಲ್ಲಿಸುವುದಕ್ಕೆ ಅಡ್ಡಿಯಾಗುತ್ತದೆ ಎಂದು ಹೇಳಿದ್ದಾರೆ. 
ಸೆಕ್ಸ್ ರಿಸರ್ಚ್ ಕುರಿತಾದ ಜರ್ನಲ್ ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದ್ದು, 350 ಪುರುಷರು 336 ಮಹಿಳೆಯರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ ಹಲವರು ಹೆಚ್ಚು ಪೋರ್ನ್ ಗೆ ಅಡಿಕ್ಟ್ ಆಗಿದ್ದು ತಾವು ಡೇಟ್ ಮಾಡುವುದಕ್ಕೆ ತಕ್ಕವರಲ್ಲ ಎಂಬ ಭಾವನೆ ಇದೆ ಎಂದು ಹೇಳಿದ್ದಾರೆ. 
SCROLL FOR NEXT