ಸಾಂದರ್ಭಿಕ ಚಿತ್ರ 
ಜೀವನಶೈಲಿ

ನಮ್ಮ ಕೆಲಸ-ಕುಟುಂಬ ಜೀವನ ಸಮತೋಲನದ ವೈಖರಿ, ನಮ್ಮ ಪೋಷಕರಿಂದ ಬಂದದ್ದು!

ಬಾಲ್ಯ ಜೀವನದಲ್ಲಿ ಪಡೆದ ಅನುಭವಗಳು ವ್ಯಕ್ತಿಯ ಮುಂದಿನ ಕೆಲಸ, ಜೀವನಶೈಲಿ ಮೇಲೆ ಭಾರೀ ಪ್ರಭಾವ...

ವಾಷಿಂಗ್ಟನ್: ಬಾಲ್ಯ ಜೀವನದಲ್ಲಿ ಪಡೆದ ಅನುಭವಗಳು ವ್ಯಕ್ತಿಯ ಮುಂದಿನ ಕೆಲಸ, ಜೀವನಶೈಲಿ ಮೇಲೆ ಭಾರೀ ಪ್ರಭಾವ ಬೀರುತ್ತದೆ. ವ್ಯಕ್ತಿಯ ಆದ್ಯತೆ, ಅವರು ಮಾಡುವ ಕೆಲಸಗಳು ವ್ಯಕ್ತಿಯ ಬಾಲ್ಯ ಜೀವನದ ಅನುಭವಗಳು, ಮನೆಯಲ್ಲಿ ಹೇಳಿಕೊಟ್ಟ ಪಾಠಗಳನ್ನು ಅವಲಂಬಿಸಿರುತ್ತದೆ. 
ಮನೆಯಲ್ಲಿರುವ ಗೃಹಿಣಿಯರು ತಮ್ಮ ತಂದೆಯ ರೀತಿ ಕೆಲಸ ಮಾಡಲು ಬಯಸುತ್ತಾರೆ ಆದರೆ ತಮ್ಮ ತಾಯಿಯ ರೀತಿ ಮಕ್ಕಳಿಗೆ ಪೋಷಕರಾಗಲು ಬಯಸುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ಅಂದರೆ ಈ ಅಧ್ಯಯನದಲ್ಲಿ ತಿಳಿದುಬರುವುದೆಂದರೆ ವ್ಯಕ್ತಿಯ ಪೂರ್ವ ಇತಿಹಾಸ,ಬಾಲ್ಯ ಜೀವನ, ತಂದೆ-ತಾಯಿಯಿಂದ ಕಲಿತ ಪಾಠಗಳು ಮುಂದಿನ ಜೀವನಕ್ಕೆ ಸಹಾಯವಾಗುತ್ತದೆ.
ಕೆಲಸಕ್ಕೆ ಸೇರುವಾಗ ನಾವು ಖಾಲಿಯಾಗಿರುವುದಿಲ್ಲ. ಬಾಲ್ಯದಲ್ಲಿ ಗಳಿಸಿದ ಅನುಭವಗಳೇ ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಲಂಡನ್ ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ಡಾ.ಲೊಯನಾ ಲೂಪು ಹೇಳುತ್ತಾರೆ. ಇವರು ಈ ಅಧ್ಯಯನದ ಸಹ ಲೇಖಕರಾಗಿದ್ದಾರೆ.
ಕೆಲಸ ಮತ್ತು ಕುಟುಂಬದ ನಡುವೆ ನಮ್ಮ ನಂಬಿಕೆಗಳು ಮತ್ತು ನಿರೀಕ್ಷೆಗಳು ಬಹುಮುಖ್ಯವಾಗಿರುತ್ತದೆ. ಇಲ್ಲಿ ನಮ್ಮ ಪೋಷಕರು ಗಾಢ ಪರಿಣಾಮ ಬೀರುತ್ತಾರೆ.
ವಕೀಲ ವೃತ್ತಿ ಮತ್ತು ಅಕೌಂಟೆಂಟ್ ಗಳಾಗಿರುವ 78 ಮಂದಿ ಪುರುಷ ಮತ್ತು ಮಹಿಳಾ ಉದ್ಯೋಗಿಗಳಿಗೆ 148 ಸಂದರ್ಶನಗಳನ್ನು ನಡೆಸಲಾಯಿತು. ಸಾಂಪ್ರದಾಯಿಕ ಕುಟುಂಬಗಳಲ್ಲಿ ತಂದೆ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿಯಾಗಿದ್ದರೆ ಅಂತಹ ವಾತಾವರಣದಲ್ಲಿ ಬೆಳೆದ ಪುರುಷ ಮತ್ತು ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿದ್ದವು.
ಕೆಲಸ ಮತ್ತು ಕುಟುಂಬದ ನಡುವೆ ಹೊಂದಾಣಿಕೆ ಮಾಡಿಕೊಳ್ಳುವ ಮನೆಯ ವಾತಾವರಣದಲ್ಲಿ ಪುರುಷರಿಗೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಆದರೆ ಮಹಿಳೆಯರ ಮೇಲೆ ಇದು ಗಾಢ ಪರಿಣಾಮ ಬೀರುತ್ತದೆ, ಅಪರಾಧಿ ಪ್ರಜ್ಞೆ ಕಾಡುತ್ತಿತ್ತು. ಮನೆಯಲ್ಲಿರುವ ಗೃಹಿಣಿಯರು ತಂದೆಯ ರೀತಿ ದುಡಿಯಲು ಮತ್ತು ತಾಯಿಯ ರೀತಿ ಮಕ್ಕಳನ್ನು ನೋಡಿಕೊಳ್ಳಲು ಇಚ್ಛಿಸುತ್ತಾರೆ ಎಂದು ಡಾ.ಲೂಪು ಹೇಳುತ್ತಾರೆ. 
ಈ ಅಧ್ಯಯನ ಹ್ಯೂಮನ್ ರಿಲೇಶನ್ಸ್ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT