ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಆಟಿಕೆ ಸಾಮಾನುಗಳು, ಟೆಡ್ಡಿ ಬೇರ್ ಗಳನ್ನು ಬೆಡ್ ಮೇಲೆ ಪಕ್ಕಕ್ಕಿಟ್ಟುಕೊಂಡು ಮಲಗುವ ಅಭ್ಯಾಸ ಹೆಚ್ಚಾಗಿರುತ್ತದೆ. ಅದು ಪಕ್ಕಕ್ಕಿದ್ದರೆ ಮಕ್ಕಳು ಸುಮ್ಮನಾಗುತ್ತಾರೆ, ಬೇಗನೆ ನಿದ್ದೆ ಮಾಡುತ್ತಾರೆ ಎಂಬ ಖುಷಿಯಿಂದ ತಾಯಂದಿರೂ ಕೂಡ ಖುಷಿಯಿಂದ ಒಪ್ಪಿಕೊಳ್ಳುತ್ತಾರೆ. ಆದರೆ ಇದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅಲರ್ಜಿ, ಉಸಿರಾಟದ ಸಮಸ್ಯೆ, ಮೂಗು ಸೋರುವಿಕೆ ಉಂಟಾಗಬಹುದು ಎಂದು ಶ್ವಾಸಕೋಶ ತಜ್ಞರು ಹೇಳುತ್ತಾರೆ. ಇದಕ್ಕೆ ರಿನಿಟಿಸ್ ಎಂದು ಕರೆಯುತ್ತಾರೆ.
ಇತ್ತೀಚಿನ ದಿನಗಳಲ್ಲಿ ಸತತ ಮೂಗು ಸೋರುವಿಕೆ ಸಮಸ್ಯೆ ಮಕ್ಕಳಲ್ಲಿ ಜಾಸ್ತಿಯಾಗುತ್ತಿದೆ. ಹೈದರಾಬಾದಿನಲ್ಲಿ 3ರಿಂದ 15 ವರ್ಷದೊಳಗಿನ ಶಾಲೆಗೆ ಹೋಗುವ 1,047 ಮಕ್ಕಳ ಮೇಲೆ ಅಧ್ಯಯನ ನಡೆಸಲಾಯಿತು. ಅವರಲ್ಲಿ ಶೇಕಡಾ 29ರಷ್ಟು ಮಕ್ಕಳಲ್ಲಿ ಅಲರ್ಜಿ ಸಮಸ್ಯೆಯಿದೆ. ಈ ಅಲರ್ಜಿ ನಿಧಾನವಾಗಿ ಅಸ್ತಮಾ ಸಮಸ್ಯೆಯನ್ನುಂಟುಮಾಡುತ್ತದೆ. ಅಧ್ಯಯನಕ್ಕೊಳಪಟ್ಟ ಶೇಕಡಾ 9ರಷ್ಟು ಮಕ್ಕಳಲ್ಲಿ ಅಸ್ತಮಾ ಸಮಸ್ಯೆ ಕೂಡ ಇದ್ದವು.
ಅಲರ್ಜಿಯಿಂದ ಮೂಗು ಸೋರುವಿಕೆ ಭಾರತದಲ್ಲಿ ಶೇಕಡಾ 40ರಷ್ಟು ಮಕ್ಕಳಲ್ಲಿ ಇದೆ ಎಂದು ಮಕ್ಕಳಲ್ಲಿ ಅಸ್ತಮಾ ಮತ್ತು ಅಲರ್ಜಿ ಅಂತಾರಾಷ್ಟ್ರೀಯ ಅಧ್ಯಯನ ತಿಳಿಸಿದೆ.
ಅಲರ್ಜಿ ಮತ್ತು ಅಸ್ತಮಾ ತಜ್ಞೆ ಡಾ.ಸುಪ್ರಿತಿ ರೆಡ್ಡಿ ಚಿಟ್ಟಾ, ಅಲರ್ಜಯಿಂದ ಮೂಗು ಸೋರುವಿಕೆ, ಶೀತವಾಗುವುದು ಮಕ್ಕಳಲ್ಲಿ ಸಾಮಾನ್ಯ ಸಮಸ್ಯೆ. ಬೆಡ್ ಶೀಟ್, ಕಂಬಳಿ, ಮೃದು ಗೊಂಬೆಗಳಲ್ಲಿ ಧೂಳು ಕೂತಿರುವುದರಿಂದ ಅಲರ್ಜಿಯಾಗುತ್ತದೆ.ಸಾಕುಪ್ರಾಣಿಗಳನ್ನು ಕೂಡ ಅತಿಯಾಗಿ ಮುದ್ದು ಮಾಡುವುದರಿಂದ ಹತ್ತಿರಕ್ಕೆ ಸೇರಿಸುವುದರಿಂದ ಅಲರ್ಜಿ ಬರಬಹುದು ಎನ್ನುತ್ತಾರೆ.
ಕೇವಲ ಬೆಡ್ ಶೀಟ್ ಗಳನ್ನು ತೊಳೆದರೆ ಸಾಕಾಗುವುದಿಲ್ಲ. ಬೆಡ್ ಶೀಟ್ ಗಳನ್ನು ತೊಳೆದರೆ ಅದರಿಂದ ಹೆಚ್ಚಿನ ಉಪಯೋಗವಾಗುವುದಿಲ್ಲ. ಅಲರ್ಜಿಯ ಹುಳಗಳು ಸಾಯಲು ಬಿಸಿ ನೀರಿನಿಂದ ಬಟ್ಟೆ ತೊಳೆಯಬೇಕು ಎನ್ನುತ್ತಾರೆ ಡಾ.ಸುಪ್ರಿತಿ.
ವಾಯುಮಾಲಿನ್ಯ ಕೂಡ ಅಲರ್ಜಿ, ಅಸ್ತಮಾಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಶ್ವಾಸಕೋಶ ತಜ್ಞ ಡಾ.ಎಸ್.ಎ.ರಫಿ. ನಗರಗಳಲ್ಲಿ ಟ್ರಾಫಿಕ್ ಗಳಲ್ಲಿ ಪೀಕ್ ಅವಧಿಯಲ್ಲಿ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವುದನ್ನು ಆದಷ್ಟು ಕಡಿಮೆ ಮಾಡಬೇಕು. ಹವಾಮಾನದಲ್ಲಿನ ವೈಪರೀತ್ಯ, ಉಷ್ಣಾಂಶ ಏರಿಕೆ ಕೂಡ ಇತ್ತೀಚಿನ ದಿನಗಳಲ್ಲಿ ಅಲರ್ಜಿ ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos