ಸಾಂದರ್ಭಿಕ ಚಿತ್ರ 
ಜೀವನಶೈಲಿ

ಈ ಮುಂಗಾರು ನಿಮ್ಮ ಪಾದಗಳ ರಕ್ಷಣೆ ಕಡೆಗೆ ಗಮನ ಕೊಡಿ

ಪ್ರೀತಿ, ಪ್ರೇಮದ ಋತು ಎಂದು ಮುಂಗಾರು ಅಥವಾ ಮಳೆಗಾಲವನ್ನು ಕರೆಯುತ್ತಾರೆ. ಮಳೆಗಾಲದಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು...

ನವದೆಹಲಿ: ಪ್ರೀತಿ, ಪ್ರೇಮದ ಋತು ಎಂದು ಮುಂಗಾರು ಅಥವಾ ಮಳೆಗಾಲವನ್ನು ಕರೆಯುತ್ತಾರೆ. ಮಳೆಗಾಲದಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು, ಪ್ರಕೃತಿ ಸೌಂದರ್ಯ, ಖುಷಿ ಮನೆಮಾಡಿರುತ್ತದೆ. ಹಾಗೆಂದು ಮಳೆಯಲ್ಲಿ ನೆನೆದುಕೊಂಡು ಹೋಗುವುದೆಂದರೆ ಬಹುತೇಕ ಮಂದಿಗೆ ಮನಸ್ಸಿಗೆ ಕಿರಿಕಿರಿಯಾಗುತ್ತದೆ. ಮಳೆಗಾಲದಲ್ಲ ಕೊಚ್ಚೆಯಾಗಿರುವ ಕೊಳಕಾದ ದಾರಿಗಳು, ನೀರು ತುಂಬಿದ ಬೀದಿಗಳು, ತೇವಾಂಶವುಳ್ಳ ತಂಪಾದ ವಾತಾವರಣ ಮತ್ತು ತೇವಗಳು ನಡೆದುಕೊಂಡು ಹೋಗುವವರಿಗೆ ಕಷ್ಟವಾಗಬಹುದು. ಪದೇ ಪದೇ ಕಾಲುಗಳು ಒದ್ದೆಯಾಗುತ್ತಿದ್ದರೆ ಬ್ಯಾಕ್ಟೀರಿಯಾ, ಫಂಗಸ್ ಸೋಂಕು, ರಿಂಗ್ ವರ್ಮ್, ತುರಿಕೆ ಮತ್ತು ಕೆಂಪು ಮೊದಲಾದವು ಆಗಬಹುದು.
ಮಳೆಗಾಲದಲ್ಲಿ ಪಾದಗಳ ರಕ್ಷಣೆ ಬಗ್ಗೆ ನಿಜಕ್ಕೂ ಕಾಳಜಿ ವಹಿಸುವ ಅಗತ್ಯವಿದೆ. ಕೆಲವು ಮುಂಜಾಗ್ರತಾ ಕ್ರಮಗಳಿಂದ ಮಳೆಗಾಲದಲ್ಲಿ ಕಾಲಿಗುಂಟಾಗುವ ಸೋಂಕು, ತುರಿಕೆ, ಬೆರಳುಗಳೆಡೆಯಲ್ಲಿ ಉಂಟಾಗುವ ಕೊಳೆತವನ್ನು ತಡೆಗಟ್ಟಬಹುದು ಎನ್ನುತ್ತಾರೆ ಸೌಂದರ್ಯ ತಜ್ಞೆ ಶಾಹ್ನಾಜ್ ಹುಸೇನ್.
ಹೆಚ್ಚಿನ ಆರ್ದ್ರತೆ ಮತ್ತು ಬೆವರುವುದು ಮಳೆಗಾಲದ ಬಹುಮುಖ್ಯ ಸಮಸ್ಯೆ. ಪಾದಗಳಲ್ಲಿ ಸೂಕ್ಷ್ಮ ಜೀವಾಣುಗಳ ಸಂಗ್ರಹವಾಗಿ ವಾಸನೆ ಬರುತ್ತಿರುತ್ತದೆ.
ಪ್ರತಿನಿತ್ಯ ಪಾದಗಳನ್ನು ತೊಳೆದು ಸ್ವಚ್ಥವಾಗಿಟ್ಟುಕೊಳ್ಳುವುದರಿಂದ ಪಾದಗಳಲ್ಲುಂಟಾಗುವ ಸಮಸ್ಯೆಗಳನ್ನು ತಪ್ಪಿಸಬಹುದು.
ಪಾದಗಳನ್ನು ತೊಳೆದ ನಂತರ ಶುಭ್ರ ಬಟ್ಟೆಯಿಂದ ಒರೆಸಿ ಟಾಲ್ಕಂ ಪೌಡರ್ ಹಚ್ಚಿ. ನೀವು ಪಾದಗಳನ್ನು ಸಂಪೂರ್ಣವಾಗಿ ಮುಚ್ಚುವ ಶೂ ಹಾಕಿಕೊಳ್ಳುತ್ತಿದ್ದರೆ ಟಾಲ್ಕಮ್ ಪೌಡರ್ ಗಳನ್ನು ಶೂ ಒಳಗೆ ಚಿಮುಕಿಸಿ.
ಅದೇ ಬೇಸಿಗೆ ಕಾಲದಲ್ಲಿ ಗಾಳಿಯಾಡುವ ಸ್ಲಿಪ್ಪರ್ ಗಳು ಉತ್ತಮ. ಪಾದಕ್ಕೆ ಚೆನ್ನಾಗಿ ಗಾಳಿಯಾಡುತ್ತಿರಬೇಕು. ಆದರೆ ತೆರೆದ ಪಾದರಕ್ಷೆಗಳಲ್ಲಿ ಧೂಳು ಕೂರುವುದು ಬಲುಬೇಗ. ಹಾಗಾಗಿ ಪಾದರಕ್ಷೆಗಳನ್ನು ಕೂಡ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ದಿನಪೂರ್ತಿ ಬಿಸಿಲಿನಲ್ಲಿ ಹೊರಹೋಗಿ ಬಂದರೆ ನಿಮ್ಮ ಪಾದಗಳನ್ನು ತಂಪು ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ಕಾಲು ಬಿಡಿ.
ಇನ್ನು ಕ್ರೀಡಾಪಟುಗಳಿಗಂತೂ ಪಾದದ ಸಮಸ್ಯೆ ಅಧಿಕ. ಸೋಂಕು, ಬ್ಯಾಕ್ಟೀರಿಯಾ ಸಮಸ್ಯೆಗಳು ತಲೆದೋರಿದಲ್ಲಿ ಆರಂಭದಲ್ಲಿಯೇ ಜಾಗ್ರತೆ ವಹಿಸಿ. ಸಾಕ್ಸ್ ಬಳಸುವುದನ್ನು ಆದಷ್ಟು ಕಡಿಮೆ ಮಾಡಿ ತೆರೆದ ಚಪ್ಪಲಿ ಧರಿಸಿ. ಸಾಕ್ಸ್ ಕಡ್ಡಾಯವಾಗಿದ್ದರೆ ಕಾಟನ್ ಸಾಕ್ಸ್ ಗಳನ್ನು ಬಳಸಿ. ಬೇಸಿಗೆ ಮತ್ತು ಆದ್ರ ಋತುವಿನಲ್ಲಿ ಪಾದಗಳು ಗಾಳಿಯಾಡುತ್ತಿರಬೇಕು.
ಮಾನ್ಸೂನ್ ನಲ್ಲಿ ಪಾದಗಳ ರಕ್ಷಣೆಗೆ ಮನೆ ಮದ್ದುಗಳು: ಪಾದಗಳು ಒದ್ದೆ ಮಾಡಿ: ಕಾಲು ಭಾಗ ಬಿಸಿ ನೀರಿಗೆ ಅರ್ಧ ಕಪ್ ಉಪ್ಪು, 10 ಡ್ರಾಪ್ ನಿಂಬೆರಸ ಅಥವಾ ಆರೆಂಜ್ ಎಣ್ಣೆ ಹಾಕಿ. ನಿಮ್ಮ ಪಾದಗಳು ಹೆಚ್ಚಾಗಿ ಬೆವರುತ್ತಿದ್ದರೆ ಚಹಾ ಮರದ ಎಣ್ಣೆಯನ್ನು ನೀರಿಗೆ ಹಾಕಿ. ಈ ನೀರಿನಲ್ಲಿ 10-15 ನಿಮಿಷಗಳ ಕಾಲ ಪಾದಗಳನ್ನಿಡಿ.
ಪಾದದ ಲೋಶನ್: ರೋಸ್ ವಾಟರ್ ಮೂರು ಚಮಚ, ಎರಡು ಚಮಚ ನಿಂಬೆಹಣ್ಣಿನ ರಸ ಮತ್ತು ಒಂದು ಚಮಚ ಶುದ್ಧ ಗ್ಲಿಸರಿನ್ ಹಾಕಿ ಮಿಶ್ರಣ ಮಾಡಿ ಪಾದಕ್ಕೆ ಒರೆಸಿ ಒಂದರ್ಧ ಗಂಟೆ ಬಿಟ್ಟು ತೊಳೆಯಿರಿ.
ಧೂಳಿನಿಂದ ಪಾದದ ರಕ್ಷಣೆ:ಸ್ವಲ್ಪ ನೀರಿಗೆ ಎರಡು ಚಮಚ ಜೇನುತುಪ್ಪ, ಒಂದು ಚಮಚ ಹರ್ಬಲ್ ಶಾಂಪೂ, ಒಂದು ಚಮಚ ಬಾದಾಮಿ ಎಣ್ಣೆ ಹಾಕಿ. ಅದರಲ್ಲಿ ಸುಮಾರು 20 ನಿಮಿಷಗಳ ಕಾಲ ಕಾಲನ್ನಿಡಿ.
ಪಾದಗಳ ಸ್ವಚ್ಛತೆ: ತಣ್ಣಗಿನ ನೀರಿಗೆ ರೋಸ್ ವಾಟರ್, ನಿಂಬೆಹಣ್ಣಿನ ರಸ ಮತ್ತು ಯು ಡಿ ಕೊಲೊಗ್ನ್ ಹಾಕಿ ಅದರಲ್ಲಿ ಪಾದಗಳನ್ನು ನೆನೆಸಿಡಿ. ಇದು ಸ್ವಚ್ಛವಾದ, ತಂಪಾದ ಮತ್ತು ಧೂಳನ್ನು ಒರೆಸುವ ಕ್ರಮವಾಗಿದೆ.
ಮಸಾಜ್ ಆಯಿಲ್: 100 ಮಿಲಿ ಲೀಟರ್ ಆಲಿವ್ ಎಣ್ಣೆಗೆ ಎರಡು ಡ್ರಾಪ್ ನೀಲಗಿರಿ ತೈಲ, ಎರಡು ಹನಿಗಳು ರೋಸ್ಮರಿ ತೈಲ ಮತ್ತು ಮೂರು ಹನಿಗಳು ಖುಸ್ ಅಥವಾ ಗುಲಾಬಿ ತೈಲವನ್ನು ಮಿಶ್ರಣ ಮಾಡಿ. ಇದನ್ನು ಪಾದಗಳಿಗೆ ಹಚ್ಚಿ ಮಸಾಜ್ ಮಾಡುತ್ತಿರಿ. ಇದು ಪಾದಗಳನ್ನು ತಂಪಾಗಿ ಮತ್ತು ಸ್ವಚ್ಛವಾಗಿಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT