ಜೀವನಶೈಲಿ

ಮಾನಸಿಕ ಕಿರುಕುಳದಿಂದ ಮಕ್ಕಳ ಸನ್ನಡತೆ ಮೇಲೆ ಹೆಚ್ಚಿನ ದುಷ್ಪರಿಣಾಮ: ಅಧ್ಯಯನ

Shilpa D
ಲಂಡನ್: ಪೋಷಕರು ಅತಿಯಾಗಿ ಮಕ್ಕಳನ್ನು ಮಾನಸಿಕ ನಿಂದನೆಗೆ ಗುರಿಮಾಡಿದರೇ ಅದು ದೈಹಿಕ ಹಿಂಸೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು  ಅಧ್ಯಯನದಿಂದ ತಿಳಿದು ಬಂದಿದೆ.
ಮಕ್ಕಳ ಹೆಸರು ಕರೆಯುವುದು, ಬೆದರಿಸುವುದು, ಪ್ರತ್ಯೇಕತೆ, ಕೆರಳಿಸುವಿಕೆ, ನಿಯಂತ್ರಣಗೊಳಿಸುವುದರಿಂದ ಅವರಿಗೆ ಸಾಮಾಜಿಕ ಬೆಂಬಲ ಇಲ್ಲದಂತಾಗಿ ಅವರ ನೆಮ್ಮದಿ ಕಡಿಮೆಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.
ಮತ್ತೊಂದೆಡೆ ಹೆಚ್ಚಿನ ರೀತಿಯಲ್ಲಿ ಮಾನಸಿಕ ನಿಂದನೆಗೆ ಗುರಿಯಾಗುವ ಮಕ್ಕಳಿಗೆ ದೈಹಿಕ ಕಿರುಕುಳಕ್ಕಿಂತ ಹೆಚ್ಚಿನ ಪ್ರಭಾವ ಬೀರುತ್ತದೆ. ಮನೆಯಲ್ಲಿ ಮಕ್ಕಳಿಗೆ ಹೆಚ್ಚಾಗಿ ಮಾನಸಿಕ ಹಾಗೂ ದೈಹಿಕ ನಿಂದನೆಗೊಳಪಟ್ಟರೇ ಸಾಮಾಜಿಕ ಬೆಂಬಲದೊಂದಿಗೆ ಅವರು ಸಂತೋಷದಿಂದಿರುತ್ತಾರೆ ಐರ್ಲೆಂಡ್ ನ ಲೈಮರಿಕ್ ವಿವಿಯ ಕ್ಯಾಥರಿನ್ ನಗೌತನ್ ಹೇಳಿದ್ದಾರೆ.
ಮಾನಸಿಕ ನಿಂದನೆ ಮಕ್ಕಳು ಒಂಟಿಯಾಗಿರುವಾಗ ಹೆಚ್ಚು ಹಾನಿ ಮಾಡುತ್ತದೆ. ಏಕೆಂದರೆ ಜನ ಇದನ್ನು ಗುರುತಿಸುವಲ್ಲಿ ಹಾಗೂ ಅದರ ಬಗ್ಗೆ ಮಾತನಾಡಲು ಅಸಮರ್ಥರಾಗಿರುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.
17 ರಿಂದ 25 ವರ್ಷದೊಳಗಿನ 465 ಯುವಕರನ್ನು ಈ ಸಂಶೋಧನೆಗೆ ಒಳಪಡಿಸಿ, ಸಂಶೋಧನೆ ನಡೆಸಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ.ಮಕ್ಕಳಿಗೆ ಹೆಚ್ಚಾಗಿ ನಿಂದಿಸುವುದರಿಂದ ಮಕ್ಕಳ ಮಾನಸಿಕ ವರ್ತನೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ದೈಹಿಕ ಹಿಂಸೆ ಸನ್ನಡತೆಯ ಮೇಲೆ ಯಾವುದೇ ರೀತಿಯ ನೆಗೆಟಿವ್ ಪರಿಣಾಮ ಬೀರುವುದಿಲ್ಲ ಎಂದು ನೌಟಾನ್ ಹೇಳಿದ್ದಾರೆ. 
SCROLL FOR NEXT