ಜೀವನಶೈಲಿ

ವ್ಯಾಯಾಮದಿಂದ ದೃಢ ಕಾಯ, ಮೂಳೆಗಳ ಬಲವರ್ಧನೆ

Sumana Upadhyaya
ದಿನನಿತ್ಯ ವ್ಯಾಯಾಮ ಮಾಡುವುದರಿಂದ ಫಿಟ್ ಆಗಿರುವುದಲ್ಲದೆ, ಮೂಳೆಗಳು ಗಟ್ಟಿಯಾಗುತ್ತವೆ ಎಂದು ಅಧ್ಯಯನ ಹೇಳುತ್ತದೆ. ವ್ಯಾಯಾಮ ಮಾಡುವುದರಿಂದ ಮೂಳೆ ಮಜ್ಜೆಯೊಳಗಿರುವ ಕೊಬ್ಬು ಕರಗುವುದಲ್ಲದೆ ನಿಮ್ಮ ದೇಹದ ಮೂಳೆಗಳು( ಬೋನ್ ಮ್ಯಾರೊ)  ಶಕ್ತಿಯುತವಾಗುತ್ತವೆ.
ಬೋನ್ ಅಂಡ್ ಮಿನರಲ್ ರಿಸರ್ಚ್ ಪತ್ರಿಕೆ ಪ್ರಕಟಿಸಿದ ಅಧ್ಯಯನದಲ್ಲಿ, ಬೊಜ್ಜು ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಮೂಳೆಗಳು ಬಲಶಾಲಿಯಾಗಿರುವುದಿಲ್ಲ. ಇಂಥವರಿಗೆ ವ್ಯಾಯಾಮ ಬಹಳ ಉಪಯೋಗವಾಗಬಹುದು ಎನ್ನುತ್ತದೆ.
ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಉತ್ತಮ ಮಾತ್ರವಲ್ಲ ಮೂಳೆಗಳು ಗಟ್ಟಿಯಾಗಿ ಇರಲು ಸಹಾಯ ಮಾಡುತ್ತದೆ ಎಂದು ಅಧ್ಯಯನದ ಮುಖ್ಯ ಲೇಖಕ ಅಮೆರಿಕಾದ ನಾರ್ಥ್ ಕೆರೊಲಿನಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಾಯಾ ಸ್ಟೈನರ್ ತಿಳಿಸಿದ್ದಾರೆ.
ಇಲಿಗಳ ಮೇಲೆ ಇವರು ಅಧ್ಯಯನ ನಡೆಸಿದ್ದರು. ಇಲಿಗಳ ಮೇಲಿನ ಅಧ್ಯಯನ ಮಾನವನ ಪರಿಸ್ಥಿತಿಗೆ ನೇರವಾಗಿ ಪರಿಣಾಮ ಬೀರದಿದ್ದರೂ ಕೂಡ ಇಲಿಗಳಲ್ಲಿ  ಮೂಳೆ ಮತ್ತು ಕೊಬ್ಬನ್ನು ಉತ್ಪತ್ತಿ ಮಾಡುವ ಕೋಶಗಳು ಮಾನವನಲ್ಲಿನ ಕೋಶಗಳಿಗೆ ಸಮನಾಗಿರುತ್ತದೆ.
ವ್ಯಾಯಾಮ ಮಾಡುವುದರಿಂದ ಸಕ್ಕರೆ ಕಾಯಿಲೆ, ಸಂಧಿವಾತ, ಅನೋರೆಕ್ಸಿಯಾ, ಮತ್ತು ಸ್ಟೀರಾಯ್ಡ್ ಔಷಧಿಗಳ ಬಳಕೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
SCROLL FOR NEXT