ಜೀವನಶೈಲಿ

ಚಿನ್ನ ಬಣ್ಣ ಮಾಸದೆ ಪಳಪಳ ಹೊಳೆಯುತ್ತಿರಲು ಈ ವಿಧಾನ ಅನುಸರಿಸಿ

Sumana Upadhyaya
ಮೃದು ಲೋಹವಾದ ಚಿನ್ನವನ್ನು ಒಂದಕ್ಕೊಂದು ತಗಲುವಂತೆ ಇಟ್ಟರೆ ಅಥವಾ ಬೇರೆ ಆಭರಣಗಳ ಜೊತೆ ಇಟ್ಟರೆ ಸವೆದು ಹೋಗುವ ಸಾಧ್ಯತೆಯಿದೆ. ಪ್ರತಿ ಆಭರಣವನ್ನು ಪ್ರತ್ಯೇಕವಾಗಿ ಸುತ್ತಿಟ್ಟುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.
ಶ್ರೀ ರಾಮ್ ಜ್ಯುವೆಲ್ಲರ್ಸ್ ಸ್ಥಾಪಕ ಅನಿತಾ ಮೆರ್ಟಿಯಾ ಮತ್ತು ಜೈಪುರ್ ಜ್ಯುವೆಲ್ಸ್ ನ ಅಧ್ಯಕ್ಷ ಸುಭಾಷ್ ನಹೆತಾ, ಬೆಲೆಬಾಳುವ ಚಿನ್ನವನ್ನು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳಬಹುದು. ದೀರ್ಘಕಾಲದವರೆಗೆ ನಳನಳಿಸುವಂತೆ ಹೇಗಿಡಬೇಕೆಂಬ ಬಗ್ಗೆ ಕೆಲವು ಟಿಪ್ಸ್ ಗಳನ್ನು ನೀಡಿದ್ದಾರೆ.
ಸ್ನಾನ ಮಾಡುವಾಗ ಅಥವಾ ದೇಹವನ್ನು ಸ್ವಚ್ಛಗೊಳಿಸುವಾಗ ಆಭರಣ ಧರಿಸಬೇಡಿ: ಸಾಬೂನ್ ನಲ್ಲಿರುವ ರಾಸಾಯನಿಕ ಪದಾರ್ಥದಿಂದ ನೀವು ಸ್ನಾನ ಮಾಡುತ್ತಿರುವಾಗ ಆಭರಣ ಧರಿಸಿದರೆ ಅದು ಮಸುಕಾಗುವ ಸಾಧ್ಯತೆಯಿದೆ.
ಪ್ರತ್ಯೇಕವಾಗಿ ಸಂಗ್ರಹಿಸಿಡಿ: ಚಿನ್ನ ಮೃದು ಲೋಹ. ಚಿನ್ನದ ತುಂಡುಗಳು ಒಂದರ ಪಕ್ಕ ಮತ್ತೊಂದಿಟ್ಟರೆ ಹಾಳಾಗುವ, ಸವೆದು ಹೋಗುವ ಸಾಧ್ಯತೆಯಿದೆ. ಪ್ರತಿ ಆಭರಣವನ್ನು ಹತ್ತಿ ಬಟ್ಟೆಯಲ್ಲಿ ಪ್ರತ್ಯೇಕವಾಗಿ ಸುತ್ತಿಡಿ. ಚಿನ್ನದ ಚೈನುಗಳನ್ನು ಸಾಧ್ಯವಾದಷ್ಟು ನೇತಾಡಿಸಿಡಿ.
ಸಾಂದರ್ಭಿಕವಾಗಿ ಪಾಲಿಷ್ ಮಾಡುತ್ತಿರಿ: ಚಿನ್ನವನ್ನು ಆಗಾಗ ಸ್ವಚ್ಛಗೊಳಿಸುವ ಅಗತ್ಯವಿಲ್ಲದಿದ್ದರೂ ಸಾಂದರ್ಭಿಕವಾಗಿ ಚಿಂಕೆ ಚರ್ಮದಿಂದ ಪಾಲಿಶ್ ಮಾಡಿಸುವುದು,  ಉಜ್ಜುವುದು ಮಾಡುತ್ತಿರಿ. ಇದರಿಂದ ಚಿನ್ನ ಪಳಪಳನೆ ಹೊಳೆಯುತ್ತಿರುತ್ತದೆ.
ಸ್ವಚ್ಛಗೊಳಿಸುವ ಟಿಪ್ಸ್ : ನೀರಿನೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ಡಿಶ್ ವಾಶಿಂಗ್ ಡಿಟರ್ಜೆಂಟ್ ನ್ನು ಬಳಸಿ.
ಚಿನ್ನವನ್ನು ನೆನೆಸಿಡಿ: ನಿಮ್ಮ ಆಭರಣದಲ್ಲಿ ಕಲ್ಲು, ಹರಳುಗಳಿದ್ದರೆ ನೀರಿನಲ್ಲಿ ನೆನೆಸಿಡಬೇಡಿ. ಶುಭ್ರ ಹತ್ತಿ ಬಟ್ಟೆಯನ್ನು ತೆಗೆದುಕೊಂಡು ನೀರಿನಲ್ಲಿ ಒದ್ದೆ ಮಾಡಿ ಕಲ್ಲುಗಳಿರುವ ಆಭರಣವನ್ನು ಉಜ್ಜಿಡಿ. ಸರಳ, ಡಿಸೈನ್ ಗಳಿಲ್ಲದ ಕಲ್ಲುಗಳಿಲ್ಲದ ಚಿನ್ನವನ್ನು ನೆನೆಸಿಡಬಹುದು.
ಒಂದು ಸಲಕ್ಕೆ ಕೈಯಿಂದ ಆಭರಣ ಉಜ್ಜಿ ಅಥವಾ ಹತ್ತಿ ಸ್ವ್ಯಾಬ್ ಮಾಡಿ: ಅತಿ ಭಾರತ ಆಭರಣಗಳಲ್ಲಿ ಡಿಸೈನ್ ಗಳು ಹೆಚ್ಚಿದ್ದರೆ ಮಕ್ಕಳ ಮೃದುವಾದ ಟೂತ್ ಬ್ರಶ್ ನ್ನು ಬಳಸಿ ತೊಳೆಯಬಹುದು. ಬ್ರಶ್ ಗಳನ್ನು ಮಾತ್ರ ಮೃದುವಾಗಿ ಬಳಸಬೇಕು.
ಬೆಚ್ಚಗಿನ ನೀರಿನಿಂದ ನೆನೆಸಿರಿ:ಸೂಡ್ಸ್ ಮತ್ತು ಮೃದುವಾದ ಬಟ್ಟೆಯಿಂದ ಆಭರಣ ಒದ್ದೆಯಾಗಿದ್ದರೆ ಉಜ್ಜಿಡಿ. ಅಥವಾ ಒಂದು ರಾತ್ರಿ ಹಾಗೆಯೇ ಒಣಗಲು ಬಿಡಿ.
ಜಾಡು ಆಭರಣಗಳು: ಬೆಲೆಬಾಳುವ ಆಭರಣಗಳಲ್ಲಿ ಏನಾದರೂ ಗುರುತುಗಳಾಗಿದ್ದರೆ ನೀರು ಮುಟ್ಟಿಸಬೇಡಿ. ಅದರಲ್ಲಿ ತೇವ ಉಳಿದು ತುಕ್ಕು ಹಿಡಿಯುವ ಸಾಧ್ಯತೆಯಿದೆ. 
SCROLL FOR NEXT