ಜೀವನಶೈಲಿ

ಗರ್ಭಿಣಿ ಮಹಿಳೆಯರು ಮೊಬೈಲ್ ಬಳಸುವುದರಿಂದ ಮಗುವಿಗೆ ಹಾನಿ ಇಲ್ಲ: ಅಧ್ಯಯನ ವರದಿ

Srinivas Rao BV
ವಾಷಿಂಗ್ ಟನ್: ಗರ್ಭಿಣಿ ಮಹಿಳೆಯರು ಮೊಬೈಲ್ ಬಳಕೆ ಮಾಡುವುದರಿಂದ ಗರ್ಭದಲ್ಲಿರುವ ಮಕ್ಕಳಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ. 
ಗರ್ಭಿಣಿ ಮಹಿಳೆಯರು ಮೊಬೈಲ್ ಬಳಕೆ ಮಾಡುವುದರಿಂದ ಮಕ್ಕಳ ನರಗಳ ಬೆಳವಣಿಗೆ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಅಧ್ಯಯನ ವರದಿ ಮೂಲಕ ಸ್ಪಷ್ಟವಾಗಿದೆ. ಮೊಬೈಲ್ ಬಳಕೆಗೆ ಸಂಬಂಧಿಸಿದ ರೇಡಿಯೋ ತರಂಗಗಳು, ವಿದ್ಯುತ್ಕಾಂತೀಯ ಕ್ಷೇತ್ರಗಳು ಗರ್ಭದಲ್ಲಿರುವ ಮಗುವಿನ ನರಗಳ ಬೆಳವಣಿಗೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. 
ಮೊಬೈಲ್ ಫೋನ್ ಬಳಕೆಯಿಂದ ಗರ್ಭದಲ್ಲಿರುವ ಮಗುವಿನ ನರಗಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಈ ಅಧ್ಯಯನ ವರದಿ ಸುಳ್ಳು ಮಾಡಿದೆ ಎಂದು ಸಂಶೋಧಕ ಪಾಪಾಡೋಪೌಲೌ ತಿಳಿಸಿದ್ದಾರೆ. ಬಿಎಂಸಿ ಪಬ್ಲಿಕ್ ಹೆಲ್ತ್ ಎಂಬ ಜರ್ನಲ್ ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ. 
SCROLL FOR NEXT