ಸಾಂದರ್ಭಿಕ ಚಿತ್ರ 
ಜೀವನಶೈಲಿ

ನಾಯಿ ಮರಿ ಜೊತೆ ಮಲಗಿದರೆ ಗುಣಮಟ್ಟದ ನಿದ್ದೆ ಮೇಲೆ ಪರಿಣಾಮ: ಅಧ್ಯಯನ

ಸಾಕು ನಾಯಿಗಳನ್ನು ಮುದ್ದು ಮಾಡುವುದೆಂದರೆ ಯಾರಿಗಿಷ್ಟವಿಲ್ಲ ಹೇಳಿ? ನಾಯಿಯನ್ನು...

ವಾಷಿಂಗ್ಟನ್: ಸಾಕು ನಾಯಿಗಳನ್ನು ಮುದ್ದು ಮಾಡುವುದೆಂದರೆ ಯಾರಿಗಿಷ್ಟವಿಲ್ಲ ಹೇಳಿ? ನಾಯಿಯನ್ನು ವಾಹನದಲ್ಲಿ ಜೊತೆಯಲ್ಲಿ ಕರೆದುಕೊಂಡು ಹೋಗುವುದು, ಸುತ್ತಾಟಕ್ಕೆ ಹೋಗುವಾಗ ಕರೆದೊಯ್ಯುವುದು, ನಿದ್ದೆ ಮಾಡುವಾಗ ಪಕ್ಕದಲ್ಲಿ ಮಲಗಿಸಿಕೊಳ್ಳುವುದು, ತಬ್ಬಿಕೊಳ್ಳುವುದು, ಮುದ್ದು ಮಾಡುವುದು ಇತ್ಯಾದಿಗಳನ್ನು ಮಾಡುತ್ತಾರೆ.  
ಸಾಕುನಾಯಿಯೇ ಆದರು ಕೂಡ ಅವುಗಳಿಂದ ಅಂತರ ಕಾಯ್ದುಕೊಳ್ಳುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಬೆಡ್ ರೂಂಲ್ಲಿ ನಾಯಿಯನ್ನು ಪಕ್ಕದಲ್ಲಿ ಮಲಗಿಸಿಕೊಳ್ಳಿ, ಆದರೆ ತಬ್ಬಿಕೊಳ್ಳುವುದು, ಮುತ್ತಿಡುವುದು ಮಾಡಬೇಡಿ, ಇದರಿಂದ ನಿದ್ದೆ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತದೆ ಹೊಸ ಅಧ್ಯಯನವೊಂದು.
ಸಂಶೋಧಕರ ಪ್ರಕಾರ, ನಿಮ್ಮ  ಸಾಕುನಾಯಿ ಬೆಡ್ ರೂಂನಲ್ಲಿ ಪಕ್ಕದಲ್ಲಿ ಮಲಗಿದ್ದರೆ ಮನಸ್ಸಿಗೆ ಖುಷಿಯಾಗಬಹುದು. ಆದರೆ ನಿಮ್ಮ ನಿದ್ದೆಯ ಗುಣಮಟ್ಟವನ್ನು  ಹಾಳು ಮಾಡುತ್ತದೆ ಎಂದು ಹೇಳುತ್ತಾರೆ.
ನಾಯಿ ಮರಿ ಬೆಡ್ ರೂಂನಲ್ಲಿದ್ದರೆ ತೊಂದರೆ ಎಂದು ಬಹುತೇಕ ಜನರು ಭಾವಿಸುತ್ತಾರೆ. ಕೆಲವರಿಗೆ ಪಕ್ಕದಲ್ಲಿ ನಾಯಿಮರಿಯಿದ್ದರೆ ನಿಜಕ್ಕೂ ಸುಖ ಮತ್ತು ಸುರಕ್ಷತೆ ಎಂದು ಭಾವಿಸುತ್ತಾರೆ ಎಂದು ಅರಿಝೊನಾ ಕ್ಯಾಂಪಸ್ ನ ಮಾಯೊ ಕ್ಲಿನಿಕ್ಸ್ ನ ಮುಖ್ಯ ಲೇಖಕ ಲೂಯಿಸ್ ಕ್ರಾನ್ ಹೇಳುತ್ತಾರೆ.
ಸುಮಾರು 40 ಮಂದಿ ವಯಸ್ಕರು ಮತ್ತು ಅವರ ಸಾಕು ನಾಯಿಗಳೊಂದಿಗೆ ಸುಮಾರು 5 ತಿಂಗಳ ಕಾಲ ಅಧ್ಯಯನ ನಡೆಸಲಾಯಿತು. ಸತತ ಏಳು ರಾತ್ರಿಗಳವರೆಗೆ ನಾಯಿಗಳು ಮತ್ತು ಮನುಷ್ಯರ ನಿದ್ದೆಯ ಅಭ್ಯಾಸಗಳನ್ನು ಅಧ್ಯಯನ ಮಾಡಲಾಯಿತು. ಅಧ್ಯಯನದ ನಂತರ ತಿಳಿದುಬಂದ ಅಂಶವೆಂದರೆ ನಾಯಿಗಳೊಂದಿಗೆ ನಿದ್ದೆ ಮಾಡುತ್ತಿದ್ದ ಕೆಲವು ವಯಸ್ಕರು ಆರಂಭದ ದಿನಗಳಲ್ಲಿ ಚೆನ್ನಾಗಿ ನಿದ್ದೆ ಮಾಡುತ್ತಿದ್ದರು.
ಆದರೆ ದಿನಗಳು ಕಳೆಯುತ್ತಿದ್ದಂತೆ ಮನುಷ್ಯರು ಮತ್ತು ಅವರ ಸಾಕು ನಾಯಿಗಳ ನಡುವಿನ ಸಂಬಂಧದಲ್ಲಿ ವ್ಯತ್ಯಾಸವಾಗುತ್ತಿತ್ತು. ಅದಕ್ಕೆ ಸಾಕು ನಾಯಿಗಳೊಟ್ಟಿಗೆ ಮಲಗುವುದೇ ಕಾರಣ ಎನ್ನುತ್ತಾರೆ ಡಾ. ಕ್ರಾಹ್ನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT