ಜೀವನಶೈಲಿ

ನಡು ವಯಸ್ಸಿನಲ್ಲಿ ಉದ್ವಿಗ್ನತೆ: ತಾಯಿ, ಒಡಹುಟ್ಟಿದವರ ಜೊತೆ ಒತ್ತಡದ ಜೀವನ ಕಾರಣ

Sumana Upadhyaya
ವಾಷಿಂಗ್ಟನ್: ನಮ್ಮ ನಡು ವಯಸ್ಸಿನಲ್ಲಿ ನಮ್ಮ ಸುಖ, ಸಂತೋಷ ಮತ್ತು ಆರೋಗ್ಯ ನಾವು ತಾಯಿ ಮತ್ತು ಸಹೋದರ-ಸಹೋದರಿಯರ ಜೊತೆ ಹೊಂದಿರುವ ಗುಣಮಟ್ಟದ ಸಂಬಂಧಗಳನ್ನು ಅವಲಂಬಿಸಿರುತ್ತದೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ.
ನಮ್ಮ ತಾಯಿ ಮತ್ತು ಒಡಹುಟ್ಟಿದವರು ಮತ್ತು ಬಾಳ ಸಂಗಾತಿ ಜೊತೆ ಒತ್ತಡದ ಪರಿಸ್ಥಿತಿಯಲ್ಲಿದ್ದರೆ ಅದು ಖಿನ್ನತೆಯ ಲಕ್ಷಣವನ್ನು ಸೂಚಿಸುತ್ತದೆ ಎಂದು ಲೊವಾ ಸ್ಟೇಟ್ ವಿಶ್ವವಿದ್ಯಾಲಯದ ಸಂಶೋಧಕಿ ಮೆಗನ್ ಗಿಲ್ಲಿಗನ್ ಕಂಡುಹಿಡಿದಿದ್ದಾರೆ. ಈ ಮೂರೂ ಸಂಬಂಧಗಳಿಂದ ಒಂದೇ ರೀತಿಯ ಪರಿಣಾಮ ಬೀರುತ್ತದೆ ಮತ್ತು ಒಂದು ಇನ್ನೊಂದಕ್ಕಿಂತ ಹೆಚ್ಚು ಅಲ್ಲ ಎಂದಿದೆ.
ನಮ್ಮ ಸಂಗಾತಿಯೊಂದಿಗೆ ನಾವು ಹೊಂದಿರುವ ಸಂಬಂಧದ ಬಗ್ಗೆ ಕುಟುಂಬ ವಿಷಯದ ತಜ್ಞರು ಹೆಚ್ಚು ಗಮನ ಕೇಂದ್ರೀಕರಿಸುತ್ತಾರೆ ಎನ್ನುತ್ತಾರೆ ಗಿಲ್ಲಿಗನ್. ವರುಷಗಳು ಉರುಳುತ್ತಾ ಹೋದಂತೆ ನಿಮ್ಮ ಕುಟುಂಬ, ಸಂಬಂಧಿಕರ ಜೊತೆಗಿನ ಸಂಬಂಧಗಳು ಗಟ್ಟಿಯಾಗುತ್ತಾ ಹೋಗುತ್ತದೆ.
ತಾಯಿ-ಮಗಳ ಸಂಬಂಧ ಇನ್ನೂ ಮಹತ್ವದ್ದು. ತಾಯಂದಿರು ಮತ್ತು ವಯಸ್ಕ ಮಕ್ಕಳ ನಡುವಿನ ಒತ್ತಡದಲ್ಲಿ ಹೆಣ್ಣು ಮಕ್ಕಳ ಜೊತೆ ತಾಯಂದಿರ ಒತ್ತಡ ಗಂಡು ಮಕ್ಕಳಿಗಿಂತ ಅಧಿಕವಾಗಿರುತ್ತದೆ. ಆದರೂ ಬಾಳ ಸಂಗಾತಿ ಮತ್ತು ಒಡಹುಟ್ಟಿದವರ ವಿಷಯದಲ್ಲಿ ಲಿಂಗ ಯಾವುದೇ ವ್ಯತ್ಯಾಸ ಮಾಡುವುದಿಲ್ಲ. 
ವಯಸ್ಕರಾಗುತ್ತಿದ್ದಂತೆ ತಾಯಿ ಮತ್ತು ಮಗಳು ಸ್ನೇಹಿತರಂತೆ ಆಗುತ್ತಾರೆ ಮತ್ತು ಕೆಲವೊಮ್ಮೆ ಜಗಳ ಮಾಡಿಕೊಳ್ಳುತ್ತಾರೆ. ಇದು ತೀವ್ರವಾದ ಸಂಬಂಧ. ವಯಸ್ಕರಾಗುತ್ತಿದ್ದಂತೆ ಮಕ್ಕಳು ಪೋಷಕರನ್ನು ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೆ ಮತ್ತು ತಾಯಂದಿರನ್ನು ವಿಶೇಷವಾಗಿ ಹೆಣ್ಣು ಮಕ್ಕಳು ಹೆಚ್ಚು ಕಾಳಜಿ ವಹಿಸುತ್ತಾರೆ.
ಇಲ್ಲಿ ಸಂಶೋಧಕರ ತಂಡ 495 ವಯಸ್ಕ ಮಕ್ಕಳು ಮತ್ತು 254 ಕುಟುಂಬಗಳನ್ನು ಅಧ್ಯಯನಕ್ಕೊಳಪಡಿಸಿತ್ತು. ಅಧ್ಯಯನ ಸೋಷಿಯಲ್ ಸೈನ್ಸ್ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
SCROLL FOR NEXT