ಜೀವನಶೈಲಿ

ಎಚ್ಚರ! ಬೆಳಿಗ್ಗೆ ಉಪಹಾರ ಸೇವಿಸದಿದ್ದರೆ ಬೊಜ್ಜು ಹೆಚ್ಚಾಗುತ್ತದೆ

Srinivas Rao BV
ನ್ಯೂಯಾರ್ಕ್: ನೀವು ಬೆಳಗಿನ ಉಪಹಾರ ಸೇವಿಸದೇ ಇರುವ ಅಭ್ಯಾಸ ಹೊಂದಿದ್ದರೆ, ಅದನ್ನು ಶೀಘ್ರವೇ ಬದಲಾವಣೆ ಮಾಡಿಕೊಳ್ಳಿ. ಇಲ್ಲದೇ ಇದ್ದರೆ ಬೊಜ್ಜು ಖಂಡಿತಾ ಹೆಚ್ಚಾಗುತ್ತದೆ. 
ಹೌದು,  ಬೆಳಗಿನ ಉಪಹಾರ ಸೇವಿಸದೇ ಇದ್ದಲ್ಲಿ ಬೊಜ್ಜು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ಅಮೆರಿಕದ ಮೇಯೊ ಕ್ಲಿನಿಕ್ ನ ಸಂಶೋಧಕರು. ಬೆಳಗಿನ ಉಪಹಾರ ಸೇವಿಸದೇ ಇರುವವರನ್ನು ಉಪಹಾರ ಸೇವಿಸುವವರೊಂದಿಗೆ ಹೋಲಿಕೆ ಮಾಡಲಾಗಿದ್ದು, ಉಪಹಾರ ಸೇವನೆ ಮಾಡದೇ ಇದ್ದ ಶೇ.26.7 ರಷ್ಟು ಜನರಲ್ಲಿ ಬೊಜ್ಜು ಹೆಚ್ಚಾಗಿರುವುದು ಅಧ್ಯಯನ ವರದಿ ವೇಳೆ ಬೆಳಕಿಗೆ ಬಂದಿದೆ. 
ಉಪಹಾರವನ್ನು ನಿಯಮಿತವಾಗಿ ಸೇವಿಸದೇ ಇರುವುದು ಸ್ಥೂಲಕಾಯತೆ ಮತ್ತು ತೂಕ ಹೆಚ್ಚಳವಾಗುವುದಕ್ಕೆ ನೇರ ಪರಿಣಾಮ ಹೊಂದಿರುತ್ತದೆ ಎಂದು ಮೇಯೊ ಕ್ಲಿನಿಕ್ ನ ಸಂಶೋಧಕರಾದ ಕೆವಿನ್ ಸ್ಮಿತ್ ಹೇಳಿದ್ದಾರೆ.  ಇನ್ನು ಉಪಹಾರ ಸೇವಿಸದೆಯೇ ಇರುವವರಲ್ಲಿ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಅತಿ ಹೆಚ್ಚಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಬೊಜ್ಜು ಹೆಚ್ಚಾಗಿರುವುದು ಕಂಡುಬಂದಿದೆ. 
2005 ರಿಂದ 2017 ರ ವರೆಗೆ 18-87 ವಯಸ್ಸಿನ ಸುಮಾರು 347 ಮಂದಿಯನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು, ನಿಯಮಿತವಾಗಿ ತೂಕ, ಸೊಂಟ ಮತ್ತು ಸೊಂಟದ ಸುತ್ತಳತೆಯನ್ನು ಪರೀಕ್ಷಿಸಲಾಗುತ್ತಿತ್ತು. ಉಪಹಾರ ಸೇವಿಸದೇ ಇದ್ದವರ ಸೊಂಟದ ಸುತ್ತಳತೆ ಉಪಹಾರ ಸೇವಿಸುವವರ ಸೊಂಟದ ಸುತ್ತಳತೆಗಿಂತ  ಸರಾಸರಿ ಶೇ.9.8 ಸೆಂಟಿಮೀಟರ್ ಹೆಚ್ಚಿತ್ತು, ಆದ್ದರಿಂದ ಬೊಜ್ಜು, ಸ್ಥೂಲ ಕಾಯದ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲು ಬೆಳಿಗ್ಗೆ ಉಪಹಾರ ಸೇವಿಸುವುದು ಸೂಕ್ತ ಎನ್ನುತ್ತಾರೆ ಸಂಶೋಧಕರು 
SCROLL FOR NEXT