ಜೀವನಶೈಲಿ

ಮಳೆಗಾಲದಲ್ಲಿ ಚರ್ಮ ಮತ್ತು ಕೂದಲಿನ ರಕ್ಷಣೆ

Sumana Upadhyaya

ಮಳೆಗಾಲ ಎಂದ ತಕ್ಷಣ ಉತ್ಸಾಹ ಮೂಡುತ್ತದೆ. ಎಲ್ಲೆಲ್ಲೂ ಹಸಿರು, ಸಮೃದ್ಧಿಯ ಕಾಲ, ಆದರೆ ಈ ಕಾಲದಲ್ಲಿ ಯುವತಿಯರು ಮತ್ತು ಮಹಿಳೆಯರಿಗೆ ಕೂದಲು ಮತ್ತು ಚರ್ಮದ ಆರೋಗ್ಯ ಕಾಪಾಡುವುದೆಂದರೆ ಸ್ವಲ್ಪ ಕಠಿಣ ಕೆಲಸ.

ಮಳೆಗಾಲದಲ್ಲಿ ಚರ್ಮ ಮತ್ತು ಕೂದಲಿನ ರಕ್ಷಣೆಗೆ ಇಲ್ಲಿವೆ ಕೆಲವು ಟಿಪ್ಸ್ ಗಳು:
ತಲೆಕೂದಲಿನ ರಕ್ಷಣೆ: ಮಳೆಗಾಲದಲ್ಲಿ ತಲೆಕೂದಲು ಬೇಗನೆ ಒದ್ದೆಯಾಗಿ ಸಿಕ್ಕು ಕಟ್ಟುವುದು ಮತ್ತು ಕೂದಲು ಉದುರುವುದು ಹೆಚ್ಚು. ಇಂತಹ ಸಂದರ್ಭದಲ್ಲಿ ಕೂದಲಿನ ಬುಡ ಗಟ್ಟಿಯಾಗಿ ಬಲಿತು ಕೂದಲು ಚೆನ್ನಾಗಿ ಬೆಳೆಯಲು, ತಲೆಹೊಟ್ಟು ನಿವಾರಣೆಯಾಗಲು ನೈಸರ್ಗಿಕ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ ಉತ್ತಮ. ಮಳೆಗಾಲಕ್ಕೆ ಹೊಂದುವ ಎಣ್ಣೆ ಹಚ್ಚಿಕೊಂಡರೆ ಕೂದಲ ಸಮಸ್ಯೆ ಇರುವುದಿಲ್ಲ.

ಚರ್ಮದ ರಕ್ಷಣೆ:
ಮಳೆಗಾಲವೆಂದ ಮಾತ್ರಕ್ಕೆ ಧೂಳು, ಮಾಲಿನ್ಯ ಇರುವುದಿಲ್ಲವೆಂದರ್ಥವಲ್ಲ. ಎಸ್ ಪಿಎಫ್ ಆಧಾರಿತ ಉತ್ಪನ್ನಗಳನ್ನು ಬಳಸಿದರೆ ಚರ್ಮಕ್ಕೆ ಉತ್ತಮವಾದ ಹೊಳಪು ಬರುತ್ತದೆ. ನೈಸರ್ಗಿಕ ಎಸ್ ಪಿಎಫ್ ಜೊತೆಗೆ ಹೈಡ್ರೇಟಿಂಗ್ ಫೇಸ್ ಜೆಲ್ ನ್ನು ಬಳಸುವುದು ಮುಖ್ಯ. ಚರ್ಮದ ತುರಿಕೆ ಮತ್ತು ಸುಟ್ಟ ಗಾಯಗಳು ಚೆನ್ನಾಗಿ ಗುಣಮುಖವಾಗುತ್ತದೆ. ಮಳೆಗಾಲದಲ್ಲಿ ಅಲೊವೆರಾ ಜೆಲ್ ನ್ನು ಬಳಸಿದರೆ ಒಣಚರ್ಮವನ್ನು ಬಗೆಹರಿಸಬಹುದು. ಇದರಿಂದ ಚರ್ಮ ಒಡೆಯುವಿಕೆಯನ್ನು ತಡೆಯಬಹುದು.

ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಅಧಿಕವಾಗಿರುತ್ತದೆ. ಚರ್ಮದಲ್ಲಿ ಅಧಿಕ ತೈಲದ ಅಂಶ ಮತ್ತು ಡೆಡ್ ಕೋಶಗಳಿರುತ್ತದೆ. ಅವುಗಳನ್ನು ತೆಗೆಯುವುದು ಮುಖ್ಯ. ಫೇಸ್ ಸ್ಕ್ರಬ್ ನ್ನು ನಿಯಮಿತವಾಗಿ ಬಳಸಬೇಕು.

SCROLL FOR NEXT