ಜೀವನಶೈಲಿ

ಧ್ಯಾನವು ನಮನ್ನು ಉತ್ತಮ ವ್ಯಕ್ತಿಗಳನ್ನಾಗಿಸುವುದೇ?

Srinivas Rao BV
ಧಾನ್ಯದಿಂದ ತಾವು ಇತರರ ವಿಷಯದಲ್ಲಿ ನಡೆದುಕೊಳ್ಳುವ ರೀತಿ ಬದಲಾಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ಹೊಸ ಸಂಶೋಧನೆಯ ಪ್ರಕಾರ ಧ್ಯಾನದಿಂದ ಅದಕ್ಕಿಂತಲೂ ಹೆಚ್ಚಿನ ಉಪಯೋಗಗಳಿವೆ ಎಂದು ತಿಳಿದುಬಂದಿದೆ. 
ಧ್ಯಾನದಿಂದ ಓರ್ವ ವ್ಯಕ್ತಿಯ ಆಕ್ರಮಣಶೀಲತೆ ಹಾಗೂ ಪೂರ್ವಾಗ್ರಹ, ಸಾಮಾಜಿಕ ಸಂಪರ್ಕ ಮುಂತಾದವುಗಳ ಮೇಲೆ ಹೇಳಿಕೊಳ್ಳುವಂತಹ ಮಹತ್ವದ ಪರಿಣಾಮ ಉಂಟಾಗುವುದಿಲ್ಲ. ಏಕಾಗ್ರತೆ ಸೇರಿದಂತೆ ಹಲವು ವಿಧದ ಧ್ಯಾನದಿಂದ ತಮ್ಮನ್ನು ತಾವು ಅತ್ಯುತ್ತಮ ಜೀವಿಗಳನ್ನಾಗಿ ರೂಪಿಸಿಕೊಳ್ಳಬಹುದು ಎಂದು ಇಂಗ್ಲೆಂಡ್ ನ ಕೊವೆಂಟ್ರಿ ವಿವಿಯ ಉಪನ್ಯಾಸಕರಾದ ಮಿಗುಯೆಲ್ ಫರಿಯಸ್ ಹೇಳಿದ್ದಾರೆ. 
ಧ್ಯಾನ ಓರ್ವ ವ್ಯಕ್ತಿ ಬೇರೆ ವ್ಯಕ್ತಿಗಳೆಡೆಗೆ ಉತ್ತಮವಾಗಿ ನಡೆದುಕೊಳ್ಳುವುದಕ್ಕೆ ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಿತ್ತು, ಇದಕ್ಕಾಗಿ ಧ್ಯಾನದ ವಿವಿಧ ಪ್ರಾಕಾರಗಳ ಬಗ್ಗೆ ಸುಮಾರು 20 ಅಧ್ಯಾಯನಗಳನ್ನು ನಡೆಸಲಾಗಿದ್ದು, ಧ್ಯಾನ ಒಟ್ಟಾರೆಯಾಗಿ ಸಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಧ್ಯಾನದಿಂದಾಗಿ ಸಹಾನುಭೂತಿ ಅಥವಾ ಭಾವಪರವಶತೆ ಹೆಚ್ಚಾಗುತ್ತದೆ, 
ಧ್ಯಾನ ಮಾಡುವವರು ಹಾಗೂ ಮಾಡದೇ ಇರುವವನ್ನು ಈ ಅಧ್ಯಯನಕ್ಕೊಳಪಡಿಸಲಾಗಿದ್ದು, ಈ ಎಲ್ಲಾ ಅಧ್ಯನಗಳಲ್ಲಿಯೂ ಬೌದ್ಧ ಮತದ ಧ್ಯಾನ ತಂತ್ರಗಳನ್ನು ಅನುಸರಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. 
SCROLL FOR NEXT