ಜೀವನಶೈಲಿ

ಲೈಂಗಿಕಾಸಕ್ತಿ ಕುಗ್ಗುತ್ತಿದೆಯೇ? ಕಾರಣಗಳು ಇವು ಇರಬಹುದು!

Srinivas Rao BV
ಪುರುಷ ಹಾಗೂ ಮಹಿಳೆಯರಲ್ಲಿ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದಾದ ಸಮಸ್ಯೆ ಲೈಂಗಿಕ ನಿರಾಸಕ್ತಿ. ಹಲವು ಜನರಿಗೆ ಇದು ಸಾಮಾನ್ಯದ ಸಮಸ್ಯೆಯಾಗಿರಬಹುದು. ಪ್ರಮುಖವಾಗಿ ಮಹಿಳೆಯರಲ್ಲಿ ಈ ರೀತಿಯ ಪ್ರವೃತ್ತಿ ನಿರ್ದಿಷ್ಟ ವಯಸ್ಸಿನ ನಂತರ ಕಾಣಿಸಿಕೊಳ್ಳುತ್ತದೆ.
ಋತು ಚಕ್ರ ನಿಲ್ಲುವ  ವಯಸ್ಸಿನಲ್ಲಿ ಮಹಿಳೆಯರಿಗೆ ಲೈಂಗಿಕಾಸಕ್ತಿ ಕಡಿಮೆಯಾಗುವುದು ಸಾಮಾನ್ಯ. ಈ ಹಂತದಲ್ಲಿ ಮಹಿಳೆಯರ ಮನಸ್ಥಿತಿಯಲ್ಲೂ ಏರುಪೇರು ಕಂಡುಬರುತ್ತದೆ. ಅಂಡಾಣು ಉತ್ಪತ್ತಿ ಕಡಿಮೆಯಾಗುವುದರಿಂದಾಗಿ ಮಹಿಳೆಯರು ಸಾಮಾನ್ಯವಾಗಿ ಋತು ಚಕ್ರ ನಿಲ್ಲುವ ವಯಸ್ಸಿನಲ್ಲಿ ಲೈಂಗಿಕಾಸಕ್ತಿ ಕಳೆದುಕೊಳ್ಳುತ್ತಾರೆ. ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗುವುದಕ್ಕೆ ಹಲವು ಕಾರಣಗಳಿರುತ್ತವೆ ಎನ್ನುತ್ತಾರೆ ಐವಿಎಫ್ ಹಾಗೂ ಸ್ತ್ರೀರೋಗತಜ್ಞರಾದ ಡಾ.ಅನುಭಾ ಸಿಂಗ್. 
ಲೈಂಗಿಕಾಸಕ್ತಿ ಕಡಿಮೆಯಾಗುವುದಕ್ಕೆ ಕೇವಲ ಹಾರ್ಮೋನ್ ಗಳಷ್ಟೇ ಅಲ್ಲದೇ, ಅತೀವ ಬಳಲಿಕೆ, ದೇಹದ ತೂಕ ಹೆಚ್ಚುವುದರಿಂದ ಆತ್ಮವಿಶ್ವಾಸದ ಕೊರತೆ, ದೈಹಿಕ ಕಾರಣಗಳಿಂದಾಗಿಯೂ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆಯಂತೆ. 
ಇನ್ನು ಪುರುಷರಲ್ಲಿ ಅಧಿಕ ರಕ್ತದೊತ್ತಡ ಹಾಗೂ ಆಂಟಿ ಆಂಡ್ರೋಜೆನಿಕ್ ಔಷಧಗಳನ್ನು ಸೇವಿಸುವುದರಿಂದಾಗಿ ಲೈಂಗಿಕಾಸಕ್ತಿ ಕಡಿಮೆಯಾಗಲಿದ್ದು, ಟೆಸ್ಟೋಸ್ಟೆರಾನ್ ಉತ್ಪಾದನೆ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ಒತ್ತಡ, ಖಿನ್ನತೆಗಳಿಂದಲೂ ಲೈಂಗಿಕಾಸಕ್ತಿ ಕಡಿಮೆಯಾಗಲಿದೆ. ಆದರೆ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಹಜವಾದ ಲೈಂಗಿಕ ಜೀವನ ನಡೆಸುವುದಕ್ಕೆ ಯಾವುದೇ ಕೃತಕ ಔಷಧಗಳೂ ಇಲ್ಲ ಎನ್ನುತ್ತಾರೆ ವೈದ್ಯರು. 
ಸಹಜವಾದ ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಇವು ಸಹಕಾರಿ
  • ಉತ್ತಮ ನಿದ್ದೆ
  • ಒತ್ತಡ ನಿರ್ವಹಣೆ 
  • ಮದ್ಯಸೇವನೆ ಕಡಿಮೆ ಮಾಡುವುದು 
  • ಟೆಸ್ಟೋಸ್ಟೆರಾನ್ ಹೆಚ್ಚುವ ಚಿಕಿತ್ಸೆ(ವೈದ್ಯರ ಸಲಹೆ ಮೇರೆಗೆ)
  • ಆಪ್ತಸಲಹೆ ಪಡೆಯುವುದು
SCROLL FOR NEXT